ಭಾರತ, ನೇಪಾಳ ಬಳಿಕ ಈಗ ಭೂತಾನ್ ಕಡೆಗೆ ಚೀನಾ ವಕ್ರದೃಷ್ಟಿ
ಇದೀಗ ಭೂತಾನ್ ವಿರುದ್ಧ ಕೆಂಗಣ್ಣು ಬೀರಿದೆ. ಭಾರತ ಮತ್ತು ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಪುಟ್ಟ ರಾಷ್ಟ್ರ ಭೂತಾನದ ಪೂರ್ವಭಾಗದಲ್ಲಿರುವ ತ್ರಾಶಿಗಂಗ್ ನಲ್ಲಿ ಅಲ್ಲಿನ ಸರ್ಕಾರ ಸಕ್ತೇಂಗ್ ವನ್ಯಜೀವಿ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿದೆ. ಈ ಭೂಭಾಗ ವಿವಾದಿತ ಪ್ರದೇಶವಾಗಿದ್ದು, ಇಲ್ಲಿ ವನ್ಯಜೀವಿ ಕೇಂದ್ರ ನಿರ್ಮಾಣ ಮಾಡಬಾರದು ಎಂದು ಚೀನಾ ವಿರೋಧಿಸಿದೆ.