ಐಸಿಸ್ ಯುಗಾಂತ್ಯ: ಅಲ್‌ಕೈದಾ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ ಹತ್ಯೆ

ಮಂಗಳವಾರ, 11 ಜುಲೈ 2017 (19:58 IST)
ಜಾಗತಿಕ ಉಗ್ರಗಾಮಿ ಅಲ್‌ಕೈದಾ ಸಂಘಟನೆಯ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ ಎಂದು ಇರಾಕಿ ಸೇನಾ ಮೂಲಗಳು ತಿಳಿಸಿವೆ.

ಬಾಗ್ದಾದಿಯ ಭದ್ರಕೋಟೆಯಾಗಿದ್ದ ಮೊಸೂಲ್ ನಗರದ ಮೇಲೆ ಇರಾಕಿ ಸೇನೆ ಮತ್ತು ಇತರ ಮಿತ್ರ ಸೇನಾ ಪಡೆಗಳು ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಬಾಗ್ದಾದಿ ಹತ್ಯೆಯಾಗಿದ್ದಾನೆ ಎನ್ನಲಾಗಿದೆ.
 
ಕಳೆದ ವರ್ಷದಿಂದ ಮೊಸುಲ್ ನಗರ ವಶಕ್ಕಾಗಿ ಇರಾಕಿ ಸೇನಾ ಪಡೆಗಳು ಮತ್ತು ಐಸಿಸ್ ಉಗ್ರರ ನಡುವೆ ಭಾರಿ ಹೋರಾಟ ನಡೆದಿತ್ತು. ಆದರೆ, ಐಸಿಸ್ ಉಗ್ರರು ಸುಲಭವಾಗಿ ಸೋಲೋಪ್ಪಿಕೊಳ್ಳುವವರಾಗಿರಲಿಲ್ಲ. 
 
ಇರಾಕ್, ರಷ್ಯಾ, ಅಮೆರಿಕ ಸೇನಾಪಡೆಗಳು ಜಂಟಿಯಾಗಿ ಮೊಸುಲ್ ನಗರದ ಮೇಲೆ ಭಾರಿ ದಾಳಿ ನಡೆಸಿದಾಗ ಐಸಿಸ್ ಉಗ್ರರು ಹತರಾಗಿದ್ದಾರೆ ಇಲ್ಲವೇ ಪರಾರಿಯಾಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ