ಭಾರತದ ಮತ್ತಿಬ್ಬರಿಗೆ ಕೊರೊನಾ ಸೋಂಕು

ಸೋಮವಾರ, 17 ಫೆಬ್ರವರಿ 2020 (09:53 IST)
ನವದಹಲಿ: ಚೀನಾದ ವುಹಾನ್ ನಿಂದ ಆಗಮಿಸಿದ ಜಪಾನ್ ನೌಕೆಯಲ್ಲಿರುವ ಮತ್ತಿಬ್ಬರು ಭಾರತೀಯರಿಗೆ ಕೊರೊನಾವೈರಸ್ ತಗುಲಿರುವುದು ಖಚಿತವಾಗಿದೆ.


ಡೈಮಂಡ್ ಪ್ರಿನ್ಸ್ ನೌಕೆಯಲ್ಲಿರುವ ಒಟ್ಟು ಐವರು ಸೋಂಕಿಗೆ ತುತ್ತಾಗಿರುವ ವರದಿಯಾಗಿದೆ. ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಮೂವರ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ಒಂದೇ ಹಡಗಿನಲ್ಲಿರುವ 355 ಮಂದಿಗೆ ಸೋಂಕು ತಗುಲಿದೆ. ಹಡಗಿನಲ್ಲಿರುವ ಭಾರತೀಯರಿಗೆ ಅಂತಿಮ ಹಂತದ ಪರೀಕ್ಷೆ ನಡೆಸಿ ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗುವುದು ಭಾರತೀಯ ರಾಯಭಾರ ಇಲಾಖೆ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ