ಪಠಾನ್ಕೋಟ್ ಡ್ಯಾಮ್ನಲ್ಲಿ ಸೇನೆಯ ಹೆಲಿಕಾಪ್ಟರ್ ಕ್ರಾಷ್

ಮಂಗಳವಾರ, 3 ಆಗಸ್ಟ್ 2021 (15:31 IST)
ಪಠಾನ್ಕೋಟ್(ಆ.03): ಪಂಜಾಬಿನ ಪಠಾನ್ಕೋಟ್ನ ರಂಜಿತ್ ಸಾಗರ್ ಡ್ಯಾಮ್ನಲ್ಲಿ ಆರ್ಮಿಯ ಹೆಲಿಕಾಪ್ಟರ್ ಕ್ರಾಷ್ ಆಗಿದೆ. ಹೆಲಿಕಾಪ್ಟರ್ನ ಪೈಲಟ್ ಹಾಗೂ ಕೋ-ಪೈಲಟ್ ಅದೃಷ್ಟವಶಾತ್ ಪಾರಾಗಿದ್ದಾರೆ. ಭಾರತದ ಆರ್ಮಿಯ 254 ಂಂ ಹೆಲಿಕಾಪ್ಟರ್ 10.0ರ ವೇಳೆಗೆ ಕ್ರಾಷ್ ಆಗಿದ್ದು, ಪೊಲೀಸ್ ಹಾಗೂ ಎನ್ಡಿಆರ್ಎಫ್ ಸದ್ಯ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೇನಾ ತಂಡವೂ ಸ್ಥಳಕ್ಕೆ ಆಗಮಿಸಿದೆ.

ಹೆಲಿಕಾಪ್ಟರ್ ಕ್ರಾಷ್ ಆಗಿರುವ ಮಾಹಿತಿ ಸಿಕ್ಕಿದೆ. ನಾವು ತಕ್ಷಣ ಸ್ಥಳದತ್ತ ಹೊರಟಿದ್ದೇವೆ ಎಂದು ಪಠಾನ್ಕೋಟ್ ಎಸ್ಎಸ್ಪಿ ಸುರಿಂದರ ಲಂಬಾ ಹೇಳಿದ್ದಾರೆ. ಯಾವುದೇ ಜೀವಹಾನಿ ಸಂಭವಿಸಿರುವ ಬಗ್ಗ ಈವರೆಗೆ ಮಾಹಿತಿ ಲಭ್ಯವಾಗಿಲ್ಲ. ಪಠಾನ್ ಕೋಟ್ನಿಂದ ಸುಮಾರು 30 ಕಿಮೀ ದೂರದಲ್ಲಿರುವ ಡ್ಯಾಮ್ನಲ್ಲಿ ಘಟನೆ ಸಂಭವಿಸಿದೆ. ವೆಪನ್ ಸಿಸ್ಟಂ ಹೆಲಿಕಾಪ್ಟರ್ ಪಠಾನ್ಕೋಟ್ನಿಂದ ದೈನಂದಿನ ವಿಹಾರಕ್ಕೆ ಹೊರಟಿತ್ತು.
ಪಠಾಣ್ಕೋಟ್ ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರವಾಗಿದೆ. ಪಠಾಣ್ಕೋಟ್ ಜಿಲ್ಲೆಯು ಅದರ ಪಶ್ಚಿಮದಲ್ಲಿ ಅಂತರಾಷ್ಟ್ರೀಯ  ಪಾಕಿಸ್ತಾನದ ಜೊತೆಗೆ ಗಡಿಯನ್ನು ಹಂಚಿಕೊಂಡಿದೆ.
ಪ್ರಸಿದ್ಧ ಇತಿಹಾಸಕಾರರ ಪ್ರಕಾರಪಠಾಣ್ಕೋಟ್ನ ಹೆಸರು 'ಪಠಾಣ್' ಪದದಿಂದ ಹುಟ್ಟಿಕೊಂಡಿದೆ. ರಜಪೂತ ಆಡಳಿತಗಾರರು-17-18 ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ್ದಾರೆ. ಪಠಾಣ್ಕೋಟ್ ತನ್ನ ಮಿಲಿಟರಿ ಬೇಸ್ನಿಂದಲೇ ವಿಶ್ವವಿಖ್ಯಾತವಾಗಿದೆ. ಮ್ಯಾಮನ್ ಕ್ಯಾಂಟ್. ಇದು ಏಷ್ಯಾದ ಅತಿದೊಡ್ಡ ಸೇನಾ ನೆಲೆಯಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ