ನಾಪತ್ತೆಯಾಗಿದ್ದ ಬೀಚ್ 30 ವರ್ಷಗಳ ನಂತರ ಮತ್ತೆ ಪ್ರತ್ಯಕ್ಷ!

ಮಂಗಳವಾರ, 9 ಮೇ 2017 (10:33 IST)
ಐರ್ಲೆಂಡ್: ಬೀಚ್ ನಾಪತ್ತೆಯಾಗುವುದು, ಪ್ರತ್ಯಕ್ಷವಾಗುವುದು ಎಂದರೇನು? ಐರ್ಲೆಂಡ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದಂತೂ ಸತ್ಯ.

 
30 ವರ್ಷಗಳ ಹಿಂದೆ ಕಡಲ ಒಡಲೊಳಗೆ ಸೇರಿದ್ದ ಕಿನಾರೆ ಇದೀಗ ಮತ್ತೆ ಪ್ರತ್ಯಕ್ಷವಾಗಿದೆ. 300 ಮೀಟರ್ ನಷ್ಟು ವಿಶಾಲವಾದ ಸಮುದ್ರ ದಡ 30 ವರ್ಷಗಳ ಹಿಂದೆ ನೀರು ಆವರಿಕೊಂಡಿತ್ತು.

ಇದೀಗ ಮತ್ತೆ ಕಾಣಿಸಿಕೊಂಡಿದೆ. ಅಷ್ಟು ವಿಶಾಲ ಪ್ರದೇಶದಲ್ಲಿ ಸಮುದ್ರ ನೀರು ಅಷ್ಟೇ ಹಿಂದೆ ಸರಿದಿದೆ. ಅಲ್ಲೀಗ ಸಾಕಷ್ಟು ಟನ್ ಗಟ್ಟಲೆ ಮರಳು ಸಂಗ್ರಹಗೊಂಡಿದೆ. ಹಾಗೂ ಆ ಬೀಚ್ ಇದೀಗ ಮತ್ತೆ ಪ್ರತ್ಯಕ್ಷವಾಗಿದೆ.

1984 ರಲ್ಲಿ ಭಾರೀ ಬಿರುಗಾಳಿ ಬಂದು ಕಡಲ ಕಿನಾರೆಯನ್ನು ನೀರು ನುಂಗಿ ಹಾಕಿತ್ತು. ಆದರೆ ಅದೀಗ ಮತ್ತದೇ ಹವಾಮಾನ ವೈಪರಿತ್ಯದಿಂದಾಗಿ ಕಣ್ಣಿಗೆ ಕಾಣಿಸುತ್ತಿದೆ. ಇದೀಗ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ