ಭಾರತ ಬ್ರೆಜಿಲ್ ಲಸಿಕೆ ಒಪ್ಪಂದ ಅಮಾನತು

ಬುಧವಾರ, 30 ಜೂನ್ 2021 (12:23 IST)
ಭಾರತದ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಖರೀದಿಗಾಗಿ ಮಾಡಿಕೊಂಡಿದ್ದ ಒಪ್ಪಂದವನ್ನು ಬ್ರೆಜಿಲ್ ಅಮಾನತುಗೊಳಿಸಿದೆ. ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ಆರಂಭಿಸಿದೆ.
 
ರಿಯೊ ಡಿ ಜನೈರೊ: ಭಾರತದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆ ಖರೀದಿಗಾಗಿ ಮಾಡಿಕೊಂಡಿದ್ದ 324 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಬ್ರೆಜಿಲ್ ಅಮಾನತುಗೊಳಿಸಿದೆ. ಈ ಒಪ್ಪಂದದ ಮೂಲಕ ಅಧ್ಯಕ್ಷ ಜೈರ್ ಬೊಲ್ಸೊನರೊ ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದ್ದು, ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.
 
ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ 20 ಮಿಲಿಯನ್ ಡೋಸ್ ಖರೀದಿಗಾಗಿ ಮಾಡಿಕೊಂಡ ಒಪ್ಪಂದದ ಬಳಿಕ ಅಕ್ರಮದ ಕುರಿತಾಗಿ ಮಧ್ಯವರ್ತಿಗಳು ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿಸಿದ್ದು ಬೊಲ್ಸೊನರೊ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ