ಉಕ್ರೇನ್ ಬೆಂಬಲಕ್ಕೆ ನಿಂತ ಬ್ರಿಟನ್

ಶುಕ್ರವಾರ, 3 ಫೆಬ್ರವರಿ 2023 (10:23 IST)
ಲಂಡನ್ : ಉಕ್ರೇನ್ಗೆ ಯುದ್ಧ ವಿಮಾನಗಳನ್ನು ಕಳುಹಿಸುತ್ತೇವೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಹೇಳಿದೆ. ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಬೆನ್ ವ್ಯಾಲೆಸ್ ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ.
 
ಯುದ್ಧ ವಿಮಾಗಳನ್ನು ಪೂರೈಸುವ ಪ್ರಕ್ರಿಯೆಯಲ್ಲಿ ನಾವು ಸ್ಪಷ್ಟವಾಗಿದ್ದೇವೆ. `ಯಾವುದನ್ನೂ ಆಳಬೇಡಿ, ಯಾವುದನ್ನೂ ತಳ್ಳಿಹಾಕಬೇಡಿ’ ಅನ್ನೋದು ಕಳೆದ ವರ್ಷದಲ್ಲಿ ನಾನು ಕಲಿತ ಒಂದು ವಿಷಯ. ರಷ್ಯಾದ ಆಕ್ರಮಣ ಹಿಮ್ಮೆಟ್ಟಿಸಲು ಸಹಾಯ ಮಾಡುವಂತೆ ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನಗಳ ಸಹಾಯ ಕೋರಿದೆ.

ಈ ನಡುವೆ ಅಮೆರಿಕ ಉಕ್ರೇನ್ಗೆ ಎಫ್-16 ಯುದ್ಧವಿಮಾನಗಳ ವಿತರಣೆಯನ್ನು ತಳ್ಳಿಹಾಕಿದೆ. ಆದ್ರೆ ಪೋಲೆಂಡ್ ಸೇರಿದಂತೆ ಇತರ ಮಿತ್ರ ರಾಷ್ಟ್ರಗಳು ಉಕ್ರೇನ್ಗೆ ನೆರವು ನೀಡಲು ಮುಕ್ತವಾಗಿವೆ. ಇದರೊಂದಿಗೆ ಕೇವಲ ಜೆಟ್ಗಳಷ್ಟೇ ಅಲ್ಲ, ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಪರೀಕ್ಷಿಸಲು ನಾನು ತುಂಬಾ ಮುಕ್ತವಾಗಿದ್ದೇನೆ ಎಂದು ವ್ಯಾಲೆಸ್ ಭರವಸೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ