ಉಕ್ರೇನ್ ಬೆಂಬಲಕ್ಕೆ ನಿಂತ ಬ್ರಿಟನ್

ಭಾನುವಾರ, 20 ನವೆಂಬರ್ 2022 (08:14 IST)
ಕೀವ್ : ಉಕ್ರೇನ್ ಅನ್ನು ಮಣಿಸಲು ಸತತ ದಾಳಿ ನಡೆಸುತ್ತಿರುವ ರಷ್ಯಾ ತನ್ನ ಮಿತಿಯ ಎಲ್ಲ ಮಾದರಿಯ ಕ್ಷಿಪಣಿ ಹಾಗೂ ಸ್ಫೋಟಕಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸುತ್ತಿದೆ.
 
ಅದರಲ್ಲೂ ಇತ್ತೀಚೆಗೆ ಉಕ್ರೇನಿನ ಮೂಲ ಸೌಕರ್ಯಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇದರಿಂದ ಉಕ್ರೇನಿನ ಜನ ಬೆಚ್ಚಿ ಬೀಳುತ್ತಿದ್ದಾರೆ.

ಇದೀಗ ಬ್ರಿಟನ್ ಪ್ರಧಾನಿಯಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ರಿಷಿ ಸುನಾಕ್ ಉಕ್ರೇನ್ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಕೀವ್ಗೆ ಇಂದು ಅನಿರೀಕ್ಷಿತ ಭೇಟಿ ನೀಡಿದ ರಿಷಿ ಸುನಾಕ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಉಕ್ರೇನ್ ಗೆಲ್ಲುವವರೆಗೆ ಬ್ರಿಟನ್ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ರಷ್ಯಾದಿಂದ ಅಬ್ಬರಿಸುತ್ತಿರುವ ಇರಾನಿ ಡ್ರೋನ್ಗಳನ್ನು ಎದುರಿಸಲು 125 `ಆ್ಯಂಟಿ ಏರ್ಕ್ರಾಫ್ಟ್ ಗನ್’ಗಳನ್ನು ಪೂರೈಸುವುದಾಗಿ ಹಾಗೂ 50 ಮಿಲಿಯನ್ Sಖಿಉ ಪ್ಯಾಕೇಜ್ (ವಾಯುಸೇನೆ ರಕ್ಷಣಾತ್ಮಕ ಸೌಲಭ್ಯ) ಪೂರೈಸುವುದಾಗಿ ಭರವಸೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ