California Fire: ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: ಕೋಟಿ ಕೋಟಿ ಸಂಭಾವನೆ ಪಡೆಯುವ ಹಾಲಿವುಡ್ಡಿಗರು ಈಗ ಬೀದಿಯಲ್ಲಿ

Krishnaveni K

ಶುಕ್ರವಾರ, 10 ಜನವರಿ 2025 (10:29 IST)
Photo Credit: X
ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿ ದಿಡೀರನೇ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದ ಕೋಟಿ ಕೋಟಿ ಹಣ ಸಂಭಾವನೆ ಪಡೆಯುವ ಹಾಲಿವುಡ್ ಕಲಾವಿದರು ಈಗ ಬೀದಿಗೆ ಬಿದ್ದಂತಾಗಿದೆ.

ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಲ್ಲಿ ಸಾವಿನ ಸಂಖ್ಯೆ 5 ಕ್ಕೇರಿದೆ. ಇದುವರೆಗೆ ಸುಮಾರು 1.40 ಲಕ್ಷ ಮಂದಿಯನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ. ಹಲವರು ಮನೆ ಮಠ ಕಳೆದುಕೊಂಡಿದ್ದಾರೆ. ವಿಐಪಿಗಳು ತಮ್ಮ ಕಾರುಗಳಲ್ಲಿ ದಿನ ಕಳೆಯುವಂತಾಗಿದೆ.

ಕಾಡ್ಗಿಚ್ಚಿನ ಪರವಾಗಿ ಕ್ಯಾಲಿಫೋರ್ನಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಹಾಲಿವುಡ್ ಖ್ಯಾತ ನಾಮರು ವಾಸವಿರುವ ಹಾಲಿವುಡ್ ಹಿಲ್ ಗೂ ಕಾಡ್ಗಿಚ್ಚು ಹಬ್ಬಿದೆ. ಹಾಲಿವುಡ್ ಕಲಾವಿದರಾದ ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೋರ್, ಜೇಮೀ ಲೀ ಮುಂತಾದವರು ಮನೆ ಕಳೆದುಕೊಂಡಿದ್ದಾರೆ.

ವಿಶೇಷವೆಂದರೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮಗನ ಮನೆಗೂ ಬೆಂಕಿ ಬಿದ್ದಿದೆ. ಬಾಲಿವುಡ್ ನಟಿ ನೋರಾ ಫತೇಹಿ ಮನೆ ಕೂಡಾ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಕಾಡ್ಗಿಚ್ಚಿನ ಸಂದರ್ಭದಲ್ಲಿ ನೋರಾ ಫತೇಹಿ ಮನೆ ಖಾಲಿ ಮಾಡಿದ್ದಾರೆ.  ಇನ್ನು ಕಾಡ್ಗಿಚ್ಚಿನ ಕಾರಣದಿಂದಾಗಿ ಲಾಸ್ ಏಂಜಲೀಸ್ ನಲ್ಲಿ ಆಸ್ಕರ್ ನಾಮಿನಿರ್ದೇಶನ ವಿಳಂಬವಾಗಿದೆ.

ಬೆಂಕಿ ನಂದಿಸಲು ನೀರಿಲ್ಲ
ವಿಶ್ವದ ದೊಡ್ಡಣ್ಣ ಎಂದೇ ಕರೆಯಿಸಿಕೊಳ್ಳುವ ಅಮೆರಿಕಾ ಈಗ ಕಾಡ್ಗಿಚ್ಚನ್ನು ನಂದಿಸಲು ನೀರಿಲ್ಲದೇ ಪರದಾಡುತ್ತಿದೆ. ಇದನ್ನು ಭಾವೀ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ