ದೇಶಾದ್ಯಂತ ಕಪ್ಪು ಹಣ ಎಷ್ಟಿದೆ ಗೊತ್ತಾ..? ಇಲ್ಲಿದೆ ಕೇಂದ್ರ ಕೊಟ್ಟ ಉತ್ತರ

ಭಾನುವಾರ, 23 ಜುಲೈ 2017 (12:02 IST)
ದೇಶಾದ್ಯಂತ ನಡೆಸಿದ ತೆರಿಗೆ ನಡೆಸಿದ ದಾಳಿ, ಸಮೀಕ್ಷೆ ಮತ್ತು ಜಪ್ತಿಯಲ್ಲಿ 71,941 ಕೋಟಿ ರೂಪಾಯಿ ಘೋಷಣೆಯಾಗದ ಆದಾಯದ ಹಣ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್`ಗೆ ತಿಳಿಸಿದೆ.
 

ವಿತ್ತ ಸಚಿವಾಲಯ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನೋಟ್ ಬ್ಯಾನ್ ನವೆಂಬರ್ 9ರಿಂದ ಜನವರಿ 10ವರೆಗೆ 5,400 ಕೋಟಿ ರೂ. ಘೋಷಿಸದ ಹಣ ಮತ್ತು 367 ಕಿಲೋ ಗ್ರಾಂ ಬಂಗಾರವನ್ನ ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ. ಒಟ್ಟು 2014 ಏಪ್ರಿಲ್ 1ರಿಂದ ಫೆಬ್ರವರಿ 28, 2017ರವರೆಗೆ ಪತ್ತೆಯಾದ ಕಪ್ಪುಹಣದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಒದಗಿಸಲಾಗಿದೆ.

2,027 ತಂಡಗಳಾಗಿ ದಾಳಿ ನಡೆಸಿ 36,051 ಕೋಟಿ ರೂ, ಘೋಷಿಸದ ಹಣ, ಇದರ ಜೊತೆಗೆ 2890 ಕೋಟಿ ರೂ. ಘೋಷಿಸದ ಆಸ್ತಿ ಇದೆ ಎಂದು ಕೇಂದ್ರ ತಿಳಿಸಿದೆ. ಮೂರು ವರ್ಷಗಳಲ್ಲಿ ಐಟಿ ಇಲಾಖೆ 15,000 ಸಮೀಕ್ಷೆಗಳನ್ನ ನಡೆಸಿದ್ದು, 33,000 ಕೋಟಿ ಕಪ್ಪು ಹಣ ಪತ್ತೆಯಾಗಿರುವುದಾಗಿ ಮಾಹಿತಿ ಒದಗಿಸಲಾಗಿದೆ.ಇದರಲ್ಲಿ ನೋಟ್ ಬ್ಯಾನ್ ಸಂದರ್ಭವೇ ಅತಿ ಹೆಚ್ಚು ಹಣ ಪತ್ತೆಯಾಗಿದೆ ಎಂದು ಕೇಂದ್ರ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ