ಭಾರತ-ಜಪಾನ್ ಒಂದಾಗಿರುವುದನ್ನು ನೋಡಿ ಹೊಟ್ಟೆ ಉರಿದುಕೊಂಡ ಚೀನಾ

ಶುಕ್ರವಾರ, 15 ಸೆಪ್ಟಂಬರ್ 2017 (09:50 IST)
ಬೀಜಿಂಗ್: ಭಾರತ ಮತ್ತು ಜಪಾನ್ ನಡುವೆ ಗಾಢವಾಗುತ್ತಿರುವ ಸ್ನೇಹ ಸಂಬಂಧ ನೆರೆಯ ಚೀನಾ ದೇಶದ ಹೊಟ್ಟೆ  ಉರಿಸಿದೆ. ಭಾರತ-ಜಪಾನ್ ಒಂದಾದರೆ ತನಗೆ ಮಾರಕ ಎಂದು ಅದು ನಂಬಿಕೊಂಡಿದೆ.


ಚೀನಾ ಜತೆ ಡೋಕ್ಲಾಂ ಗಡಿ ವಿವಾದದ ಸಂದರ್ಭದಲ್ಲೂ ಜಪಾನ್ ಭಾರತಕ್ಕೆ ಬೆಂಬಲ ಸೂಚಿಸಿತ್ತು. ಇದೀಗ ಬುಲೆಟ್ ರೈಲು ಯೋಜನೆ ನೆಪದಲ್ಲಿ ಎರಡೂ ರಾಷ್ಟ್ರಗಳು ಮತ್ತಷ್ಟು ಹತ್ತಿರವಾಗುತ್ತಿರುವುದು ಅದರ ನಿದ್ದೆಗೆಡಿಸಿದೆ. ಅಲ್ಲದೆ ಅಮೆರಿಕಾ ಕೂಡಾ ಭಾರತಕ್ಕೆ ಹತ್ತಿರವಾಗುತ್ತಿರುವುದು ಅದಕ್ಕೆ ನುಂಗಲಾರದ ತುತ್ತಾಗಿದೆ.

ಹೀಗಾಗಿ ಜಪಾನ್ ಪ್ರಧಾನಿ ಭಾರತ ಭೇಟಿ ಬಗ್ಗೆ  ತನ್ನ ಮಾಧ್ಯಮಗಳಿಗೆ ಲೇಖನ ಹರಿಯಬಿಡುತ್ತಿರುವ ಚೀನಾ, ಭಾರತ ಜಪಾನ್ ಸಂಬಂಧ ಕೇವಲ ಸ್ನೇಹಕ್ಕಷ್ಟೇ ಸೀಮಿತವಾಗಿರಲಿ. ಯುದ್ಧದ ಒಕ್ಕೂಟವಾಗಬಾರದು ಎಂದಿದೆ.

ಇದನ್ನೂ ಓದಿ.. ಸಿಕ್ಕಿಂ ವಿಚಾರದಲ್ಲಿ ಎಡವಟ್ಟು ಹೇಳಿಕೆ ನೀಡಿ ಕ್ಷಮೆ ಕೇಳಿದ ಪ್ರಿಯಾಂಕ ಚೋಪ್ರಾ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ