ಪ್ರಧಾನಿ ಮೋದಿ ತಮ್ಮ ದೇಶಕ್ಕೆ ಭೇಟಿ ನೀಡುವುದು ಚೀನಾಗೆ ಇಷ್ಟವಿಲ್ಲ?

ಗುರುವಾರ, 24 ಆಗಸ್ಟ್ 2017 (11:13 IST)
ನವದೆಹಲಿ: ಡೋಕ್ಲಾಂ ಗಡಿ ವಿವಾದದಲ್ಲಿ ಸಂಬಂಧ ಹಳಸಿಕೊಂಡಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಚೀನಾದಲ್ಲಿ ನಡೆಯಲಿರುವ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸುತ್ತಾರಾ? ಇಲ್ಲವೇ?

 
 ಈ ಬಗ್ಗೆ ಸ್ಪಷ್ಟ ಉತ್ತರ ಕೊಡಲು ಚೀನಾ ನಿರಾಕರಿಸಿದೆ. ಅಲ್ಲದೆ ಚೀನಾ ವಿದೇಶಾಂಗ ವಕ್ತಾರರು ಭಾರತೀಯ ಪ್ರಧಾನಿಯ ಪಾಲ್ಗೊಳ್ಳುವಿಕೆಯ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುವ ಬದಲು ನುಣುಚಿಕೊಂಡಿದ್ದಾರೆ. ‘ಬ್ರಿಕ್ಸ್ ಶೃಂಗಕ್ಕೆ ತಯಾರಿ ಭರದಿಂದ ಸಾಗುತ್ತಿದೆ. ಹೆಚ್ಚು ಕಡಿಮೆ ಎಲ್ಲಾ ತಯಾರಿಗಳೂ ನಡೆದಿವೆ’ ಎಂದು ವಿದೇಶಾಂಗ ವಕ್ತಾರ  ಹ್ಯೂ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಢೋಕ್ಲಾಂ ವಿಷಯದಲ್ಲಿ ಗಡಿಯಿಂದ ಭಾರತ ಸೇನಾ ಪಡೆ ಹಿಂತೆಗೆಯದ ಹೊರತು ಯಾವುದೇ ರಾಜಿಯಿಲ್ಲ ಎಂದು ಮೋದಿ ಪಾಲ್ಗೊಳ್ಳುವಿಕೆ ಬಗ್ಗೆ ನಿರಾಸಕ್ತಿ ತೋರಿದ್ದಾರೆ.

ಇದನ್ನೂ ಓದಿ.. ಇನ್ನು ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಎನ್ನುವಂತಿಲ್ಲ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ