ವಾಷಿಂಗ್ಟನ್ : ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ಶಸ್ತ್ರಾಸ್ತ್ರ, ತಂತ್ರಜ್ಞಾನವನ್ನು ಚೀನಾ ಒದಗಿಸುತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ ಆರೋಪಿಸಿದೆ.
2022 ರಲ್ಲಿ ಪಾಶ್ಚಿಮಾತ್ಯ ದೇಶಗಳೊಂದಿಗಿನ ವ್ಯಾಪಾರವು ಕುಸಿದ ನಂತರ ಚೀನಾವು ರಷ್ಯಾದ ಪ್ರಮುಖ ವ್ಯಾಪಾರ ಪಾಲುದಾರನಾಗಿ ಮಾರ್ಪಟ್ಟಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಿಂದ ರಷ್ಯಾಕ್ಕೆ ಬೆಂಬಲ ಒದಗಿಸಿದೆ ಎಂದು ತಿಳಿಸಿದೆ.
Pಖಅ ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪನಿಗಳು ನ್ಯಾವಿಗೇಷನ್ ಉಪಕರಣಗಳು, ಜ್ಯಾಮಿಂಗ್ ತಂತ್ರಜ್ಞಾನ ಮತ್ತು ಫೈಟರ್-ಜೆಟ್ ಭಾಗಗಳನ್ನು ಚೀನಾ ಒದಗಿಸಿದೆ. ಮಂಜೂರು ಮಾಡಿದ ರಷ್ಯಾದ ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪನಿಗಳಿಗೆ ಇವುಗಳನ್ನು ರವಾನಿಸಿದೆ ಎಂದು ಹೇಳಿದೆ.
ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುತ್ತಿರುವುದು ಚೀನಾವನ್ನು ಉತ್ತೇಜಿಸಿದೆ. 2022 ರ ಡಿಸೆಂಬರ್ನಲ್ಲಿ ರಷ್ಯಾದ ಕಚ್ಚಾ ತೈಲದ ಮೇಲೆ ಗ್ರೂಪ್ ಆಫ್ ಸೆವೆನ್ USಆ 60 ಬೆಲೆಯ ಮಿತಿಯನ್ನು ವಿಧಿಸಿದ ನಂತರ ಮಾಸ್ಕೋಗೆ ಹೆಚ್ಚು ಅಗತ್ಯವಿರುವ ಆದಾಯ ಬರುತ್ತಿದೆ.