ಭಾರತದ ವಿರುದ್ಧ ಭಾರೀ ಅಸ್ತ್ರ ಪ್ರಯೋಗಿಸುವುದಾಗಿ ಎಚ್ಚರಿಸಿದ ಚೀನಾ
ಗುರುವಾರ, 6 ಜುಲೈ 2017 (09:42 IST)
ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ಗ್ಲೋಬಲ್ ಟೈಮ್ಸ್ ಭಾರತ ಮತ್ತು ಚೀನಾ ನಡುವೆ ಏರ್ಪಟ್ಟಿರುವ ಭೂವಿವಾದಕ್ಕೆ ಸಂಬಂಧಿಸಿದ ಬೆಂಕಿ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ. ಸಿಕ್ಕಿಂ ಸ್ವತಂತ್ರ ದೇಶದ ಕೂಗಿಗೆ ಚೀನಾದಿಂದ ಬೆಂಬಲ ನೀಡಿ, ಸಿಕ್ಕಿಂ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಸಂಪಾದಕೀಯದಲ್ಲಿ ಹೇಳಿಕೊಂಡಿದೆ.
ಭಾರತ-ಚೀನಾ-ಭೂತಾನ್ ಗಡಿಭಾಗದ ದೊಕ್ಲಾಮ್`ನಲ್ಲಿ ಚೀನಾ ರಸ್ತೆ ನಿರ್ಮಾಣಕ್ಕೆ ತಡೆಯೊಡ್ಡಿರುವ ಭಾರತ ತನ್ನ ಸೇನೆಯನ್ನ ನಿಯೋಜಿಸಿದ್ದು, ಕಳೆದ 20 ದಿನಗಳಲ್ಲಿ ತ್ರಿದೇಶಗಳ ಗಡಿಯಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ. ಭಾರತೀಯರು ಕರೆಯುವ ದೊಕ ಲಾ ಭೂತಾನ್ ಕರೆಯುವ ದೊಕ್ಲಾಮ್ ಚೀನಾದ ದೊಕ್ಲಾಂಗ್ ಭೂತಾನ್`ಗೆ ಸೇರಿದ್ದೆಂದು ಭಾರತ ಹೇಳುತ್ತಿದ್ದರೆ ಅದು ನಮಗೆ ಸೇರಿದ್ದೆಂದು ಚೀನಾ ಉದ್ಧಟತನ ತೂರುತ್ತಿದೆ.
ಭಾರತ ಮತ್ತು ಭೂತಾನ್ ನಡುವೆ ಏರ್ಪಟ್ಟ ಗಾಢ ರಾಜತಾಂತ್ರಿಕ ಮಿಲಿಟರಿ ಒಪ್ಪಂದದ ಬಳಿಕ ಚೀನಾ ಕಾಲ್ಕೆರೆದು ಜಗಳಕ್ಕೆ ಬರುತ್ತಿದೆ. ಚೀನಾದ ಸೇನಾ ಪಡೆ ತ್ರಿದೆಶಗಳ ಗಡಿ ಚಿಕನ್ ನೆಕ್ ಬಳಿಯ ಡೊಕ್ಲಾಮ್`ನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾದಾಗ ಭಾರತದ ಸೇನಾ ಪಡೆ ತಡೆಯೊಡ್ಡಿದೆ. ಭೂತಾನ್ ಬೆಂಬಲಿಸಿದ್ದಕ್ಕೆ ಪ್ರತಿಯಾಗಿ ಸಿಕ್ಕಿಂನಲ್ಲಿ ಬೆಂಕಿ ಹಚ್ಚುವುದಾಗಿ ಚೀನಾ ಬೆದರಿಸಿದೆ.
ಮೇ 1976ರಲ್ಲಿ ಸಿಕ್ಕಿಂ ರಾಜ್ಯ ಭಾರತಕ್ಕೆ ಸೇರ್ಪಡೆಯಾಗಿತ್ತು. 1898ರಲ್ಲಿ ಭಾರತ ಮತ್ತು ಚೀನಾ ನಡುವೆ ಆದ ಒಪ್ಪಂದದ ಪ್ರಕಾರ ಸಿಕ್ಕಿಂ ಗಡಿ ನಿರ್ಧರಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ