ಗಡಿಯಲ್ಲಿ ಹೆಚ್ಚಿನ ಚೀನಾ ಚಟುವಟಿಕೆ: ಭಾರತದ ಹದ್ದಿನಗಣ್ಣು

ಗುರುವಾರ, 22 ಜುಲೈ 2021 (09:40 IST)
ನವದೆಹಲಿ: ಕಳೆದ ಆರು ತಿಂಗಳಿನಿಂದ ಚೀನಾ ಭಾರತಕ್ಕೆ ಹೊಂದಿಕೊಂಡ ಗಡಿ ಪ್ರದೇಶಗಳಲ್ಲಿ ಸೇನಾ ಚಟವಟಿಕೆ ಚುರುಕುಗೊಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಭಾರತೀಯ ಸೇನೆ ಹದ್ದಿನಗಣ್ಣಿರಿಸಿದೆ.


ಉತ್ತರಾಖಂಡದ ಬಾರಾಹಟಿಯಲ್ಲಿ ಸುಮಾರು 40 ಮಂದಿ ಚೀನಾ ಯೋಧರ ಗುಂಪು ಓಡಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.  ಈ ಭಾಗದಲ್ಲಿ ಬಹಳ ದಿನಗಳ ನಂತರ ಚೀನಾ ಸೇನೆ ಓಡಾಟ ನಡೆಸಿದೆ.

ಕಳೆದ ವರ್ಷ ಚೀನಾ ಸೇನೆಯೊಂದಿಗೆ ನಡೆದ ಸಂಘರ್ಷದ ಬಳಿಕ ಭಾರತವೂ ಈ ಭಾಗದಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿದೆ. ಹೀಗಾಗಿ ಚೀನಾ ಸೇನೆ ಇಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ