ಭಾರತದ ಗಡಿಗೆ ನುಗ್ಗಿ ಗ್ರಾಮಸ್ಥರಿಗೆ ಎಚ್ಚರಿಕೆ ಕೊಟ್ಟ ಚೀನಾ ಸೇನೆ

ಮಂಗಳವಾರ, 13 ಜುಲೈ 2021 (09:40 IST)
ನವದೆಹಲಿ: ಲಡಾಖ್ ಗಡಿಯಲ್ಲಿ ಚೀನಾ ಸೇನೆ ಮತ್ತೊಂದು ಕಿರಿಕ್ ಈಗ ಬೆಳಕಿಗೆ ಬಂದಿದೆ. ಚೀನಾ ಸೇನೆ ಗಡಿ ಭಾಗದ ಗ್ರಾಮಸ್ಥರಿಗೆ ಎಚ್ಚರಿಕೆ ಕೊಟ್ಟು ತೆರಳಿದ ಘಟನೆ ಜುಲೈ 6 ರಂದು ನಡೆದಿತ್ತು ಎನ್ನಲಾಗಿದೆ.


ಟಿಬೆಟ್ ಧರ್ಮಗುರು ದಲೈಲಾಮಾ ಬರ್ತ್ ಡೇ ಆಚರಿಸುತ್ತಿದ್ದ ಲಡಾಖ್ ನ ಡೆಮ್ ಚುಕ್ ಗ್ರಾಮಸ್ಥರಿಗೆ ಚೀನಾ ಸೈನಿಕರು ಮತ್ತು ಕೆಲವು ನಾಗರಿಕರು ತಮ್ಮ ದೇಶದ ಬಾವುಟ ತೋರಿಸಿ ತಮ್ಮ ಪ್ರತಿಭಟನೆ ಸಲ್ಲಿಸಿದ್ದಾರೆ.

ಕಳೆದ ವಾರ ಪ್ರಧಾನಿ ಮೋದಿ ದಲೈಲಾಮಾ ಬರ್ತ್ ಡೇಗೆ ಶುಭ ಕೋರಿದ್ದರು. ಇದರ ಜೊತೆಗೆ ಭಾರತೀಯರು ತನ್ನ ಬದ್ಧ ವೈರಿ ದಲೈಲಾಮಾ ಬರ್ತ್ ಡೇ ಆಚರಿಸುತ್ತಿರುವುದು ಚೀನಾ ಹೊಟ್ಟೆ ಉರಿಸಿದೆ. ಇದೇ ಕಾರಣಕ್ಕೆ ತಮ್ಮ ಪ್ರತಿಭಟನೆ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ