ಚೀನಾದಲ್ಲಿ ಮತ್ತೆ ತಲೆ ಎತ್ತಿದ ಕೊರೊನಾ ವೈರಸ್

ಸೋಮವಾರ, 12 ಅಕ್ಟೋಬರ್ 2020 (22:13 IST)
ಚೀನಾದ ಅಲ್ಲಲ್ಲಿ ಕೊರೊನಾ ಕೇಸ್ ಗಳು ಮರುಕಳಿಸುತ್ತಿದ್ದು, ಬೆಚ್ಚಿಬೀಳಿಸುತ್ತಿದೆ.

ಚೀನಾದ ಕ್ವಿಂಗಾಡೋ ಪ್ರದೇಶ ವ್ಯಾಪ್ತಿಯಲ್ಲಿ ಒಂದು ವಾರದೊಳಗಾಗಿ 9 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ ಕೋವಿಡ್ – 19 ಪರೀಕ್ಷೆ ನಡೆಸಲಾಗಿದೆ.

ಅಲ್ಲಲ್ಲಿ ಕೊರೊನಾ ಕೇಸ್ ಗಳು ಮತ್ತೆ ಕಾಣಿಸಿಕೊಳ್ಳುತ್ತಿರುವುದರಿಂದಾಗಿ ಪರೀಕ್ಷೆಯನ್ನು ಸಾಮೂಹಿಕವಾಗಿ ನಡೆಸಲಾಗುತ್ತಿದೆ.

ವುಹಾನ್ ನಲ್ಲಿ ವೈರಸ್ ಕೊಂಚ ಹತೋಟಿಗೆ ಬಂದಿದೆ ಎನ್ನಲಾಗಿದ್ದು, ಚೀನಾದ ಇತರ ಪ್ರದೇಶಗಳಲ್ಲಿ ಡೆಡ್ಲಿ ವೈರಸ್ ಕಾಣಿಸಿಕೊಳ್ಳುತ್ತಿರುವುದು ಅಲ್ಲಿನ ಸರಕಾರಕ್ಕೆ ತಲೆ ನೋವು ತಂದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ