ಭಾರತ-ಚೀನಾ ಗಡಿ ಸಂಘರ್ಷ ಮಾತುಕತೆ ಮೀರಿ ಬೆಳೆದಿದೆ: ಅಮೆರಿಕಾ
ಭಾನುವಾರ, 11 ಅಕ್ಟೋಬರ್ 2020 (11:41 IST)
ನವದೆಹಲಿ: ಗಲ್ವಾನ್ ಕಣಿವೆಯ ಸಂಘರ್ಷದ ಬಳಿಕ ಭಾರತ ಮತ್ತು ಚೀನಾ ನಡುವಿನ ಗಡಿ ಸಂಬಂಧ ಮಾತುಕತೆಯ ಮಟ್ಟ ಮೀರಿದೆ ಎಂದು ಅಮೆರಿಕಾ ಹೇಳಿಕೆ ನೀಡಿದೆ.
ಅಮೆರಿಕಾದ ರಕ್ಷಣಾ ಸಲಹೆಗಾರ ರಾಬರ್ಟ್ ಓಬ್ರಿಯಾನ್ ಈ ಹೇಳಿಕೆ ನೀಡಿದ್ದಾರೆ. ಚೀನಾ ಈಗಾಗಲೇ ಬುದ್ಧಿ ಮಾತು ಕೇಳುವ ಪರಿಸ್ಥಿತಿ ಮೀರಿ ಹೋಗಿದೆ. ಪದೇ ಪದೇ ಭಾರತದ ಗಡಿ ದಾಟುವ ಪ್ರಯತ್ನ ಮುಂದುವರಿಸುತ್ತಲೇ ಇದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಅಮೆರಿಕಾ ರಕ್ಷಣಾ ಸಚಿವರೂ ಚೀನಾದ ದುರ್ವರ್ತನೆಯನ್ನು ಖಂಡಿಸಿದ್ದು, ಭಾರತದ ಗಡಿಯಲ್ಲಿ 60 ಸಾವಿರ ಸೈನಿಕರನ್ನು ನಿಯೋಜಿಸುವ ಮೂಲಕ ಆಕ್ರಮಣಕಾರೀ ವರ್ತನೆ ತೋರುತ್ತಿದೆ ಎಂದಿದ್ದಾರೆ.