ಭಾರತ- ಚೀನಾ ಯುದ್ಧದ ಕೌಂಟ್‌ಡೌನ್ ಆರಂಭ: ಚೀನಾ ಡೈಲಿ

ಬುಧವಾರ, 9 ಆಗಸ್ಟ್ 2017 (19:00 IST)
ಸಿಕ್ಕಿಂ ರಾಜ್ಯದ ಡೊಕ್ಲಾಮ್ ನಿಲುವಿನ ಕುರಿತಂತೆ ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಸಂಘರ್ಷಕ್ಕೆ ಕೌಂಟ್‌ಡೌನ್ ಆರಂಭವಾಗಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.
ಎರಡು ಪಡೆಗಳ ನಡುವಿನ ಘರ್ಷಣೆಗೆ ಎಣಿಕೆ ಆರಂಭವಾಗಿದ್ದು ಯಾವುದೇ ಸಮಯದಲ್ಲೂ ಸಂಘರ್ಷ ಆರಂಭವಾಗಬಹುದಾಗಿದೆ ಎಂದು ಚೀನಾ ಡೈಲಿ ಪತ್ರಿಕೆ ಸಂಪಾದಕೀಯದಲ್ಲಿ ಪ್ರಕಟಿಸಿದೆ.
 
ಭಾರತ ಸರಕಾರ ಅನಾಹುತವಾಗುವ ಮುಂಚೆ ಕೂಡಲೇ ಡೊಕ್ಲಾಮ್‌ನಲ್ಲಿರುವ ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
 
ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಸೇನೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಚೀನಾ ಎಚ್ಚರಿಸಿ ಡೊಕ್ಲಾಮ್ ಪ್ರದೇಶದಿಂದ ಭಾರತೀಯ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ.
 
ಒಂದು ಪರ್ವತವನ್ನು ಅಲುಗಾಡಿಸುವುದು ಸುಲಭ ಆದರೆ ಪಿಎಲ್ಎ ಸೇನೆಯನ್ನು ಅಲುಗಾಡಿಸುವುದು ಕಷ್ಟ ಎಂದ ಸೇನಾಪಡೆಗಳ ವಕ್ತಾರ ವೂ ಕಿಯಾನ್ ಚೀನಾ, ದೇಶದ ಸಾರ್ವಭೌಮತೆಯನ್ನು ಕಾಪಾಡಲು ಸೇನೆ ಸನ್ನದ್ದವಾಗಿದೆ ಎಂದು ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ