ಮಗಳನ್ನು ಕೊಂದು ಶವದ ಮೇಲೆ ಅತ್ಯಾಚಾರ ಮಾಡಿದ ಅಪ್ಪ!

ಶುಕ್ರವಾರ, 25 ಫೆಬ್ರವರಿ 2022 (06:56 IST)
ನವದೆಹಲಿ : ಬೇಲಿಯೇ ಎದ್ದು ಹೊಲ ಮೇಯ್ದರೆ ಅದನ್ನು ಅರಗಿಸಿಕೊಳ್ಳುವುದಾದರೂ ಹೇಗೆ? ಮಗಳನ್ನು ಕಣ್ಣ ರೆಪ್ಪೆಯಂತೆ ಕಾಯಬೇಕಾಗಿದ್ದ ಅಪ್ಪನೇ ಆಕೆಯನ್ನು ಕೊಂದು,
 
ಆಕೆಯ ಹೆಣದ ಮೇಲೆ ಅತ್ಯಾಚಾರ  ನಡೆಸಿರುವ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ಗುನಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ವಿಕೃತ ಕಾಮಿಯಾಗಿದ್ದ ವಿಕಲಚೇತನನೊಬ್ಬ ತನ್ನ 14 ವರ್ಷದ ಮಗಳನ್ನು ಕೊಲೆ  ಮಾಡಿದ್ದಾನೆ. ನಂತರ ಆಕೆಯ ಶವದ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಜರಂಗಗಡ ಪೊಲೀಸ್ ಠಾಣೆ ವ್ಯಾಪ್ತಿಯ ಜೈತಾ ಡೊಂಗರ್ ಗ್ರಾಮದ ನಿವಾಸಿಯಾಗಿರುವ 40 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಈ ಆರೋಪಿಯು ಮಂಗಳವಾರ ತನ್ನ 14 ವರ್ಷದ ಅಪ್ರಾಪ್ತ ಮಗಳು ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿತ್ತು. ಆದರೆ, ತನಿಖೆ ವೇಳೆ ಆತನ ಮಗಳ ನಾಪತ್ತೆಯ ಹಿಂದೆ ಆತನದ್ದೇ ಕೈವಾಡವಿರುವುದು ಬಯಲಾಗಿತ್ತು.

ತನಿಖೆಯ ಸಮಯದಲ್ಲಿ ಮಂಗಳವಾರ ಮಧ್ಯಾಹ್ನ ಆ ಬಾಲಕಿ ತನ್ನ ತಂದೆಯೊಂದಿಗೆ ಹೋಗಿದ್ದನ್ನು ಕೊನೆಯ ಬಾರಿ ನೋಡಿದ್ದಾಗಿಯೂ, ಅದಾದ ನಂತರ ಆಕೆ ಮನೆಗೆ ವಾಪಾಸ್ ಬಂದಿಲ್ಲವೆಂದೂ ಆರೋಪಿಯ ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಮೃತ ಬಾಲಕಿಯ ತಂದೆಯನ್ನು ಕರೆದು ವಿಚಾರಣೆ ನಡೆಸಿದಾಗ, ಮನೆಯಲ್ಲಿ ಬೇರೆ ಸದಸ್ಯರು ಇದ್ದುದರಿಂದ ತನ್ನ ಮಗಳನ್ನು ಅತ್ಯಾಚಾರ ಮಾಡುವ ಉದ್ದೇಶದಿಂದ ಸಂಜೆ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದೆ. ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ದಾಮ್ಡೋಲಿ ಅರಣ್ಯಕ್ಕೆ ಕರೆದೊಯ್ದಿದ್ದೆ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ.

ಅಪ್ಪ ತನ್ನ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದಾಗ ಈ ವಿಷಯವನ್ನು ಮನೆಯವರಿಗೆಲ್ಲ ತಿಳಿಸುವುದಾಗಿ ಆಕೆ ಬೆದರಿಕೆ ಹಾಕಿದ್ದಳು. ಇದರಿಂದ ಗಾಬರಿಯಾದ ಆತ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಆಕೆಯ ಶವದ ಮೇಲೆ ಅತ್ಯಾಚಾರ ನಡೆಸಿ, ತನ್ನ ಕಾಮದಾಸೆಯನ್ನು ತೀರಿಸಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ