ಗಣೇಶ ಹಬ್ಬದಲ್ಲಿ ಎಣ್ಣೆ ಹಾಕ್ಕೊಂಡು ಮಸೀದಿ ಮುಂದೆ ಡ್ಯಾನ್ಸ್ ಮಾಡೋದು ಯಾಕೆ: ಬಿಕೆ ಹರಿಪ್ರಸಾದ್ ವಿವಾದ

Krishnaveni K

ಬುಧವಾರ, 22 ಅಕ್ಟೋಬರ್ 2025 (17:17 IST)
ಬೆಂಗಳೂರು: ಗಣೇಶ ಹಬ್ಬದ ಸಂದರ್ಭದಲ್ಲಿ ಎಣ್ಣೆ ಹಾಕ್ಕೊಂಡು ಮಸೀದಿ, ಚರ್ಚ್ ಮುಂದೆ ಡ್ಯಾನ್ಸ್ ಮಾಡ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ನಾಲಿಗೆ ಹರಿಬಿಟ್ಟಿದ್ದಾರೆ.

ಆರ್ ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಹಿಂದೂ ಸಮುದಾಯದವರ ಆಚರಣೆಯನ್ನೇ ಪ್ರಶ್ನೆ ಮಾಡಿದ್ದಾರೆ. ಆರ್ ಎಸ್ಎಸ್ ಬಗ್ಗೆ ಸದಾ ಕೆಂಡ ಕಾರುವ ಬಿಕೆ ಹರಿಪ್ರಸಾದ್ ಇದೀಗ ಹಿಂದೂಗಳು ಸಂಭ್ರಮದಿಂದ ಆಚರಿಸುವ ಗಣೇಶ ಹಬ್ಬದ ಬಗ್ಗೆಯೇ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

ಗಣೇಶ ಹಬ್ಬದ ಸಂದರ್ಭದಲ್ಲಿ ಎಣ್ಣೆ ಹಾಕ್ಕೊಂಡು ಮಸೀದಿ, ಚರ್ಚ್ ಮುಂದೆ ಡ್ಯಾನ್ಸ್ ಮಾಡೋದು ಯಾಕೆ? ಇದು ಯಾವ ಸಾಂಸ್ಕೃತಿಕ ಚಟುವಟಿಕೆ? ಇದು ಯಾವ ರೀತಿಯ ದೇಶ ಭಕ್ತಿ? ಈ ಮೂಲಕ ಇವರು ಏನು ಮಾಡಲು ಹೊರಟಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಆರ್ ಎಸ್ಎಸ್ ನವರು ದೊಣ್ಣೆ ಹಿಡಿದೇ ಪಥಸಂಚಲನ ಮಾಡುವುದು ಯಾಕೆ? ದೊಣ್ಣೆ ಇಲ್ಲದೇ ಪಥಸಂಚಲನ ಮಾಡಲಿ. ಪಥಸಂಚಲನದಲ್ಲಿ ಏನಾದರೂ ತೊಂದರೆಯಾದರೆ ಯಾರು ಹೊಣೆ? ಎಂದು ಪ್ರಶ್ನೆ ಮಾಡಿದ್ದಾರೆ. ಅವರ ಈ ಮಾತುಗಳು ವಿವಾದದ ಕಿಡಿ ಹೊತ್ತಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ