ದಟ್ಟ ಮಂಜು : ಅಪಘಾತಕ್ಕೀಡಾಗಿ ರಾಶಿ ಬಿದ್ದ ನೂರಾರು ವಾಹನ!
ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೀಡಿಯೋಗಳು ಹರಿದಾಡಿವೆ. ಸೇತುವೆಯೊಂದರ ಮೇಲೆ ಕಾರು, ಟ್ರಕ್ ಸೇರಿದಂತೆ ಹಲವಾರು ವಾಹನಗಳು ಅಪಘಾತಕ್ಕೀಡಾಗಿ, ಒಂದಕ್ಕೊಂದು ಅಂಟಿಕೊಂಡು ರಾಶಿ ಬಿದ್ದಿವೆ.
ಟ್ರಾಫಿಕ್ನಿಂದ ಹೊರಬರಲಾಗದ ಸ್ಥಿತಿಯಿಂದಾಗಿ ಜನರು ಬಾನೆಟ್ ಮೇಲೆ ನಿಂತುಕೊಂಡಿರುವುದು ಕಂಡುಬಂದಿದೆ. ನೂರಾರು ವಾಹನಗಳ ಸರಣಿ ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ, ಹಲವರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಗಳು ತಿಳಿಸಿವೆ.