ಬಿಬಿಎಂಪಿ ನಿರ್ಧಾರಕ್ಕೆ ವಾಹನ ಸವಾರರು ಗರಂ

ಮಂಗಳವಾರ, 13 ಡಿಸೆಂಬರ್ 2022 (09:04 IST)
ಬೆಂಗಳೂರು : ಸಿಲಿಕಾನ್ ಸಿಟಿಯ ವಾಹನ ಸವಾರರೇ ಎಚ್ಚರ. ಇಷ್ಟು ದಿನ ಬೆಂಗಳೂರು ಟ್ರಾಫಿಕ್ ಪೊಲೀಸರು ನಿಲ್ಲಿಸಿದ್ದ ಟೋಯಿಂಗ್ ಅನ್ನು ಮತ್ತೆ ಶುರು ಮಾಡೋ ಪ್ಲಾನ್ ನಡೆಯುತ್ತಿದೆ.

 
ಆದರೆ ಇನ್ಮುಂದೆ ಟೋಯಿಂಗ್ ಮಾಡೋ ಪ್ಲಾನ್ ಮಾತ್ರ ಟ್ರಾಫಿಕ್ ಪೊಲೀಸರ ಬದಲು ಬಿಬಿಎಂಪಿ ಮಾಡ್ತಿದೆ. ಕಳೆದ ಆರೇಳು ತಿಂಗಳ ಹಿಂದೆ ಬೆಂಗಳೂರು ಸಂಚಾರಿ ಪೊಲೀಸರ ವಿರುದ್ಧ ಜನಕ್ರೋಶ ವ್ಯಕ್ತವಾಗಿತ್ತು. ಕರುಣೇ ಇಲ್ಲದ ಟ್ರಾಫಿಕ್ ಪೊಲೀಸರು ಬೇಕಾಬಿಟ್ಟಿಯಾಗಿ ಟೋಯಿಂಗ್ ಮಾಡ್ತಾರೆ,

 
ಇದೀಗ ಮತ್ತೆ ಟೋಯಿಂಗ್ ಸದ್ದು ಕೇಳಿ ಬರ್ತಿದೆ. ಆದರೆ ಈ ಬಾರಿ ಟೋಯಿಂಗ್ ಮಾಡೋ ಪ್ಲಾನ್ ಮಾತ್ರ ಬಿಬಿಎಂಪಿಯದ್ದು. ಪೊಲೀಸರು ಖುದ್ದು ಇದ್ದು ಖಾಸಗಿಯವರ ಸಹಯೋಗದೊಂದಿಗೆ ಟೋಯಿಂಗ್ ಮಾಡುವಾಗಲೇ ಜನ ಆಕ್ರೋಶ ವ್ಯಕ್ತಪಡಿಸ್ತಿದ್ರು. ಈಗ ಬಿಬಿಎಂಪಿ ಸಂಪೂರ್ಣವಾಗಿ ಖಾಸಗಿ ಎಜೆನ್ಸಿ ಮೂಲಕ ಟೋಯಿಂಗ್ ಮಾಡಿಸಲು ಮುಂದಾಗಿದೆ.

ಇದಕ್ಕೆ ಜನ ತೀವ್ರವಾಗಿ ಆಕ್ರೋಶ ಹೊರ ಹಾಕ್ತಿದ್ದಾರೆ. ಇದು ಬಿಬಿಎಂಪಿಯ ಹಣ ಮಾಡೋ ಯೋಜನೆ, ಜನರಿಗೆ ಅದರಲ್ಲೂ ವಾಹನ ಸವಾರರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ ಅಂತಾ ಸಿಡಿಮಿಡಿಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ