ಎಬೋಲಾ, SARS,ಚಿಕನ್ಪಾಕ್ಸ್ಗಿಂತ ಅಪಾಯಕಾರಿ ಡೆಲ್ಟಾ : 3ನೇ ಅಲೆ ಮುನ್ಸೂಚನೆ!

ಶುಕ್ರವಾರ, 30 ಜುಲೈ 2021 (18:11 IST)
ನವದೆಹಲಿ(ಜು.30):  ದೇಶದಲ್ಲಿ ಅದರಲ್ಲೂ ಪ್ರಮುಖವಾಗಿ ಕೇರಳದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಇದರಿಂದ ಕರ್ನಾಟಕದಲ್ಲೂ ಆತಂಕ ಹೆಚ್ಚಾಗಿದೆ. ಇದು 3ನೇ ಅಲೆ ಮುನ್ಸೂಚನೆ ಅನ್ನೋ ಮಾತುಗಳು ಬಲವಾಗುತ್ತಿದೆ. ಇದರ ಬೆನ್ನಲ್ಲೇ ಅಮೆರಿಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಹಾಗೂ ಪ್ರಿವೆನ್ಶನ್ ಡೆಲ್ಟಾ ವೈರಸ್ ಹಾಗೂ 3ನೇ ಅಲೆ ಕುರಿತು ಮಹತ್ವದ ಎಚ್ಚರಿಕೆ ನೀಡಿದೆ.

•ಭಾರತದ ಕೆಲ ರಾಜ್ಯಗಳಲ್ಲಿ ಕೊರೋನಾ ಗಣನೀಯ ಏರಿಕೆ
•3ನೇ ಅಲೆ ಆತಂಕದ ನಡುವೆ ಅಮೆರಿಕದಿಂದ ಬಂತು ಮಹತ್ವದ ಎಚ್ಚರಿಕೆ
•ಎಬೋಲಾ, SARS, ಚಿಕನ್ಪಾಕ್ಸ್ಗಿಂತ ಭೀಕರ ಡೆಲ್ಟಾ ಪ್ಲಸ್

ಡೆಲ್ಟಾ ರೂಪಾಂತರಿ ವೈರಸ್ ಅತ್ಯಂತ ಭೀಕರ ವೈರಸ್. ಆರೋಗ್ಯದಲ್ಲಿ ಗಂಭೀರ ಪರಿಣಾಣ ಬೀರಲಿದೆ. ಇದು ಎಬೋಲಾ, MERS, SARS, ಚಿಕನ್ಪಾಕ್ಸ್ ಸೇರಿದಂತೆ ಇತರ ಸಾಂಕ್ರಾಮಿಕ ರೋಗದಿಂದ ಡೆಲ್ಟಾ ರೂಪಾಂತರಿ ವೈರಸ್ ಭೀಕರ ಹಾಗೂ ಅತ್ಯಂತ ಅಪಾಯಕಾರಿ ಎಂದು ಯುಎಸ್ ಡಿಸೀಸ್ ಕಂಟ್ರೋಲ್ ಹೇಳಿದೆ.
ಡೆಲ್ಟಾ ಅತ್ಯಂತ ವೇಗವಾಗಿ ಹರಡಲಿದೆ. ಎರಡೂ ಡೋಸ್ ಲಸಿಕೆ ಪಡೆದರೂ ಡೆಲ್ಟಾ ಆತಂಕ ತಪ್ಪಿದ್ದಲ್ಲ. ಹೀಗಾಗಿ ಅತೀವ ಎಚ್ಚರಿಕೆ ಅವಶ್ಯಕ. ಹಲವು ರಾಷ್ಟ್ರಗಳಲ್ಲಿ ಡೆಲ್ಟಾ ವೇರಿಯೆಂಟ್ ಪ್ರಕರಣ ಹೆಚ್ಚಾಗುತ್ತಿದೆ. ಈಗಷ್ಟೇ ಎರಡನೇ ಅಲೆ ತಗ್ಗಿದೆ. ಇದೀಗ 3ನೇ ಅಲೆ ಡೆಲ್ಟಾ ರೂಪದಲ್ಲಿ ಬಂದರೂ ಅಚ್ಚರಿಯಿಲ್ಲ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಹಾಗೂ ಪ್ರಿವೆನ್ಶನ್ ನಿರ್ದೇಶಕ ಡಾ. ರೋಚೆಲ್ ಪಿ ವಾಲೆನ್ಸ್ಕಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ