ಕ್ಯಾಲಿಫೋರ್ನಿಯಾದ ವಿದ್ಯಾರ್ಥಿನಿ ಕುಕೀಸ್ ತಯಾರಿಸಿದ್ದು ಯಾವುದರಿಂದ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ಸೋಮವಾರ, 22 ಅಕ್ಟೋಬರ್ 2018 (12:05 IST)
ಕ್ಯಾಲಿಫೋರ್ನಿಯಾ : ಸಾಮಾನ್ಯವಾಗಿ ಕುಕೀಸ್‌ಗಳನ್ನು ಗೋಧಿ ಹಿಟ್ಟಿನಿಂದ ಇಲ್ಲವಾದಲ್ಲಿ ಮೈದಾ ಹಿಟ್ಟಿನಿಂದ ತಯಾರಿಸುತ್ತಾರೆ. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾದ ಹೈಸ್ಕೂಲ್‌ ವಿದ್ಯಾರ್ಥಿನಿಯೊಬ್ಬಳು ಕುಕೀಸ್ ತಯಾರಿಸಿದ್ದು ಯಾವುದರಿಂದ ಎಂದು ಕೇಳಿದ್ರೆ ಶಾಕ್ ಆಗ್ತೀರಾ.

ಹೌದು. ವಿದ್ಯಾರ್ಥಿನಿ ತನ್ನ ಸ್ನೇಹಿತೆಯರಿಗಾಗಿ ಮನೆಯಲ್ಲಿ ಕುಕೀಸ್ ತಯಾರಿಸಲು ಹೊರಟಿದ್ದಾಳಂತೆ. ಆಗ ಗೋಧಿ ಹಿಟ್ಟು ಖಾಲಿಯಾಗಿರುವುದರಿಂದ ಆಕೆ ಮನೆಯಲ್ಲಿಟ್ಟಿದ್ದ ಅಜ್ಜಿಯ ಚಿತಾ ಭಸ್ಮದಿಂದ ಕುಕೀಸ್ ತಯಾರಿಸಿದ್ದಾಳೆ.

 

ಅದನ್ನು ತೆಗೆದುಕೊಂಡು ಹೋಗಿ ತನ್ನ ಸ್ನೇಹಿತೆಯರಿಗೆ ನೀಡಿದ್ದಾಳೆ. ಅದನ್ನು ಹೇಗೆ ತಯಾರಿಸಿದೆ ಎಂದು ಸ್ನೇಹಿತರು ಕೇಳಿದಾಗ ತನ್ನ ಅಜ್ಜಿಯ ಭಸ್ಮವನ್ನು ಸಕ್ಕರೆಯ ಜೊತೆ ಬೆರೆಸಿ ಕುಕೀಸ್‌ಗಳನ್ನು ತಯಾರಿಸಿದ್ದಾಗಿ ಹೇಳಿದ್ದಾಳಂತೆ. ಸದ್ಯ ಕುಕೀಸ್‌ ತಿಂದವರಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ