911 ತುರ್ತು ನಂಬರ್ ಗೆ ಕರೆ ಮಾಡಿದ ಬಾಲಕ ಪೊಲೀಸರಿಗೆ ಹೇಳಿದ್ದೇನು ಗೊತ್ತಾ?

ಶುಕ್ರವಾರ, 9 ಆಗಸ್ಟ್ 2019 (09:18 IST)
ಅಮೇರಿಕಾ: ಸಾಮಾನ್ಯವಾಗಿ ಜನರು 911 ತುರ್ತು ನಂಬರ್ ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸುತ್ತಾರೆ. ಆದರೆ ಅಮೇರಿಕಾದ ಪ್ಲೋರಿಡಾದಲ್ಲಿ 5 ವರ್ಷದ ಬಾಲಕನೊಬ್ಬ ತುರ್ತು ಸಂಖ್ಯೆಗೆ ಕರೆ ಮಾಡಿ ಹೇಳಿದ್ದನ್ನು ಕೇಳಿ ಪೊಲೀಸರೇ ಅಚ್ಚರಿಗೊಂಡಿದ್ದಾರೆ.
ಹೌದು. ಬಾಲಕನೊಬ್ಬನಿಗೆ ತುಂಬಾ ಹಸಿವಾದ್ದರಿಂದ ಆತ 911 ತುರ್ತು ನಂಬರ್ ಗೆ ಕರೆ ಮಾಡಿ, ನನಗೆ ತುಂಬಾ ಹಸಿವಾಗಿದೆ ಪಿಜ್ಜಾ ತಂದುಕೊಡಿ ಎಂದು ಪೊಲೀಸರಿಗೆ ಆರ್ಡರ್ ಮಾಡಿದ್ದಾನೆ. ಕೆಲಸದ ಒತ್ತಡದ ನಡುವೆಯೂ ಕೋಪಗೊಳ್ಳದ ಪೊಲೀಸರು ಬಾಲಕನ ಮನಸ್ಥಿತಿಯನ್ನು ಅರಿತು ದೊಡ್ಡ ಪಿಜ್ಜಾ ಪೆಟ್ಟಿಗೆಯನ್ನು ತೆಗೆದುಕೊಂಡು ಆತನ ಮನೆಗೆ ಹೋಗಿದ್ದಾರೆ.ಮನೆಯವರಿಗೆ  ಪೊಲೀಸರನ್ನು ಕಂಡು ಅಚ್ಚರಿಯಾಗಿದ್ದು, ಬಳಿಕ ಪೊಲೀಸರು ನಡೆದ ವಿಚಾರವನ್ನು ತಿಳಿಸಿದ್ದಾರೆ. ಬಾಲಕನ ಚೇಷ್ಠಗೆ ಮನೆಯವರು ಪೊಲೀಸರ ಬಳಿ ಕ್ಷಮೆ ಕೇಳಿದ್ದಾರೆ. ಬಳಿಕ ಪಿಜ್ಜಾ ಪೆಟ್ಟಿಗೆಯನ್ನು ಬಾಲಕನಿಗೆ ನೀಡಿದ ಪೊಲೀಸರು ಆತನ ಜೊತೆ ಫೋಟೊ ತೆಗೆಸಿಕೊಂಡು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ