ಹೂಸು ಬಿಟ್ಟು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಕಳ್ಳ!

ಶನಿವಾರ, 13 ಜುಲೈ 2019 (06:12 IST)
ಅಮೇರಿಕಾ : ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಅವರಿಂದ ತಪ್ಪಿಸಿಕೊಡು ಅಡಗಿಕುಳಿತ  ಕಳ್ಳನೊಬ್ಬನು ಜೋರಾಗಿ ಹೂಸು ಬಿಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಅಮೆರಿಕದ ಮಿಸ್ಸೋರಿಯಲ್ಲಿ ನಡೆದಿದೆ.
ನಿರ್ಬಂಧಿತ ವಸ್ತುವೊಂದನ್ನು ಹೊಂದಿದ್ದಕ್ಕಾಗಿ  ಕ್ಲೇ ಕೌಂಟಿ ಶರಿಫ್‌ ಇಲಾಖೆ ಆತನ ವಿರುದ್ಧ ವಾರೆಂಟ್ ಜಾರಿಮಾಡಿದೆ. ಆದರೆ ಪೊಲೀಸರಿಂದ ತಪ್ಪಿಸಿಕೊಂಡ ಆತನನ್ನು ಹುಡುಕಲು ಪೊಲೀಸರು ಪೊಲೀಸ್  ನಾಯಿಗಳನ್ನು ಬಳಸಿದ್ದರು. ಆತನ ಹೂಸಿನ ವಾಸನೆ ಹಿಡಿದ ಪೊಲೀಸ್‌ ನಾಯಿಗಳು ಆತ ಅವಿತಿದ್ದ ಜಾಡನ್ನು ಹಿಡಿದುಬಿಟ್ಟಿವೆ


ಈ ಘಟನೆಯನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಆದರೆ ಬಂಧಿತ ವ್ಯಕ್ತಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ