ರಾಜತಾಂತ್ರಿಕತೆಯಿಂದ ಯುದ್ಧ ನಿಲ್ಲಿಸಲು ಸಾಧ್ಯ : ಝೆಲೆನ್ಸ್ಕಿ

ಭಾನುವಾರ, 22 ಮೇ 2022 (13:20 IST)
ಕೀವ್ : ರಾಜತಾಂತ್ರಿಕತೆಯಿಂದ ಮಾತ್ರ ರಷ್ಯಾ – ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಉಕ್ರೇನ್ಗೆ ಭೇಟಿ ನೀಡುತ್ತಿರುವ ಪೋರ್ಚುಗೀಸ್ ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಸಂಪೂರ್ಣ ಮಿಲಿಟರಿ ವಿಜಯಕ್ಕಿಂತ ರಾಜತಾಂತ್ರಿಕ ಪ್ರಗತಿಯಿಂದ ಮಾತ್ರ ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಹೇಳಿದ್ದಾರೆ.

ಯುದ್ಧವು ರಕ್ತಮಯವಾಗಿರುತ್ತದೆ, ಹೋರಾಟ ಇರುತ್ತದೆ. ಆದರೆ ರಾಜತಾಂತ್ರಿಕತೆಯ ಮೂಲಕ ಮಾತ್ರ ಯುದ್ಧವನ್ನು ಕೊನೆಗೊಳಿಸಬಹುದು. ಉಕ್ರೇನ್ ಮತ್ತು ರಷ್ಯಾ ನಡುವಿನ ಚರ್ಚೆಗಳು ನಿರ್ಣಾಯಕವಾಗಿ ನಡೆಯುತ್ತವೆ.

ಅದು ಯಾವ ಸ್ವರೂಪದಲ್ಲಿ ನನಗೆ ಗೊತ್ತಿಲ್ಲ. ಆದರೆ ಫಲಿತಾಂಶವು ಉಕ್ರೇನ್ಗೆ “ನ್ಯಾಯಯುತ” ಎಂದು ಝೆಲೆನ್ಸ್ಕಿ ಭರವಸೆ ನೀಡಿದರು. 

ಫಿನ್ಲ್ಯಾಂಡ್ ನ್ಯಾಟೋ ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಂತೆ ರಷ್ಯಾ ನೈಸರ್ಗಿಕ ಅನಿಲ ಸರಬರಾಜನ್ನು ನಿಷೇಧಿಸಿದೆ. ಜೊತೆಗೆ 963 ಅಮೆರಿಕವನ್ನು ರಷ್ಯಾ ಪ್ರವೇಶಿಸದಂತೆ ನಿಷೇಧಿಸಿದೆ.

ಈ ಯುದ್ಧದಿಂದಾಗಿ 64 ಲಕ್ಷ ಉಕ್ರೇನಿಯನ್ನರು ದೇಶದಿಂದ ಪಲಾಯನ ಮಾಡಿದ್ದಾರೆ. ಹಾಗಾಗಿ ಈ ಯುದ್ಧವನ್ನು ಬಗೆಹರಿಸಲು ರಾಜತಾಂತ್ರಿಕತೆಯೊಂದೆ ಪರಿಹಾರ ಎಂದು ರಷ್ಯಾ ಅಧ್ಯಕ್ಷ ವೊಲೋಡಿಮಿರ್ ಝಲೆನ್ಸ್ಕಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ