ವಿಜಯವು ನಮ್ಮದಾಗಿರುತ್ತದೆ : ಪುಟಿನ್

ಸೋಮವಾರ, 9 ಮೇ 2022 (09:29 IST)
ಮಾಸ್ಕೋ : ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ಸೋಲಿನ 77ನೇ ವಾರ್ಷಿಕೋತ್ಸವವನ್ನು ರಷ್ಯಾ ಆಚರಿಸುತ್ತಿದೆ.

ಈ ಸಂದರ್ಭದಲ್ಲಿ ಮಾಜಿ ಸೋವಿಯತ್ ರಾಷ್ಟ್ರಗಳಿಗೆ ಅಭಿನಂದನೆ ಸಲ್ಲಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ‘1945 ರಲ್ಲಿದ್ದಂತೆ, ಗೆಲುವು ನಮ್ಮದೇ ಎಂದು ಉಕ್ರೇನ್ ವಿರೋಧ ಭಾನುವಾರ ಪ್ರತಿಜ್ಞೆ ಮಾಡಿದರು.
ಎರಡನೇ ಮಹಾಯುದ್ಧದ ಜಯವನ್ನು ಕುರಿತು ಸಭೆಯನ್ನು ಉದ್ದೇಶಿ ಮಾತನಾಡಿದ ಪುಟಿನ್, ಸೈನಿಕರು 1945ರಲ್ಲಿ ಹೋರಾಟ ಮಾಡಿದಂತೆ ಈಗ ನಮ್ಮ ಸೈನಿಕರು ಗೆಲುವು ನಮ್ಮದೇ ಎಂಬ ವಿಶ್ವಾಸದಿಂದ ಉಕ್ರೇನ್ನಲ್ಲಿ ಹೋರಾಟ ಮಾಡುತ್ತಿದ್ದಾರೆ.

ನಮ್ಮ ಭೂಮಿಯನ್ನು ನಾಜಿ ಎಂಬ ಕೆಟ್ಟಶಕ್ತಿಗಳಿಂದ ಮುಕ್ತಗೊಳಿಸಲು ಸೈನಿಕರು ಹೋರಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.

ವಿವಿಧ ದೇಶಗಳ ಜನರಿಗೆ ನೋವುಂಟು ಮಾಡಿದ ನಾಜಿಸಂ ಮರುಹುಟ್ಟು ತಡೆಯುವುದು ನಮ್ಮ ಕರ್ತವ್ಯವಾಗಿದೆ. ಲೆಕ್ಕವಿಲ್ಲದಷ್ಟು ತ್ಯಾಗಗಳನ್ನು ಮಾಡಿ ನಮ್ಮ ಸೈನ್ಯವು ನಾಜಿಸಂ ಅನ್ನು ಹೊಡೆದುರುಳಿಸಿದೆ. ಆದರೆ ಈಗ ಮತ್ತೆ ಅದು ತಲೆ ಎತ್ತುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ