ನ್ಯೂಯಾರ್ಕ್: ಮಾಡೆಲಿಂಗ್ ಕ್ಷೇತ್ರ ಅಂದ ತಕ್ಷಣ ಸೌಂದರ್ಯ, ಉತ್ತಮವಾದ ದೇಹವೇ ಮುಖ್ಯ ಎಂಬ ಕಲ್ಪನೆ ಬರುವುದು ಸಹಜ. ಆದರೇ ಎಥಿಯೋಪಿಯಾದಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ವಿಕಲ ಚೇತನರು ರ್ಯಾಂಪ್ ಮೇಲೆ ಹೆಜ್ಜೆಹಾಕುವ ಮೂಲಕ ನಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ನಿರೂಪಿಸಿದ್ದಾರೆ.
ವಿಶೇಷ ಚೇತನರು ಫ್ಯಾಷನ್ ಡಿಸೈನರ್ ಗಳು ಸಿದ್ಧಗೊಳಿಸಿದ್ದ ವಿವಿಧ ಬಗೆಯ ಬಟ್ಟೆಗಳನ್ನು ಧರಿಸಿ, ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿ ಪ್ರೇಕ್ಷಕರ ಮನಸೂರೆಗೊಂಡರು. ವಿಕಲಚೇತನರಿಗೆ ನಿರ್ಧಿಷ್ಟವಾದ ಬಟ್ಟೆಗಳಿರದ ಕಾರಣ ಡಿಸೈನರ್ ಗಳೆ ಕೆಲವು ಹೊಸ ಪ್ರಯೋಗಗಳನ್ನು ಮಾಡಿ ವಿಶೇಷವಾಗಿ ವಿನ್ಯಾಸಮಾಡಿದ್ದರು. ಈ ಶೋನಲ್ಲಿ ಖ್ಯಾತ ವಿನ್ಯಾಸಕಿ ತ್ಸೆಡೆ ಕೆಬೆಡೆ ಅವರು ಡಿಸೈನ್ ಮಾಡಿದ ಬಟ್ಟೆಗಳು ಹೆಚ್ಚಾಗಿ ಪ್ರೇಕ್ಷಕರಿಗೆ ಆಕರ್ಷಣೀಯವೆನಿಸಿರುವುದು ವಿಶೇಷ.