ಕಾಂಗ್ರೆಸ್‌ನಲ್ಲಿ ಸತ್ಯವಂತರಿಗೆ ಕಾಲವಲ್ಲ: ಶೋಭಾ ಕರಂದ್ಲಾಜೆ

Sampriya

ಸೋಮವಾರ, 11 ಆಗಸ್ಟ್ 2025 (19:23 IST)
ನವದೆಹಲಿ: ಸಚಿವ ಸ್ಥಾನಕ್ಕೆ ಕೆ ಎನ್‌ ರಾಜಣ್ಣ ರಾಜೀನಾಮೆ ಸಂಬಂಧ ಸತ್ಯವಂತರಿಗೆ ಕಾಂಗ್ರೆಸ್ ನಲ್ಲಿ ಕಾಲವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ರಾಜಣ್ಣ ಅವರ ರಾಜೀನಾಮೆ ವಿಚಾರವಾಗಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕೆ.ಎನ್ ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಗೊತ್ತಾಗಿದ್ದು, ಕಾಂಗ್ರೆಸ್‍ನಲ್ಲಿ ಸತ್ಯವಂತರಿಗೆ ಕಾಲವಿಲ್ಲ. 

ರಾಹುಲ್ ಗಾಂಧಿ ಹೇಳಿಕೆಗೆ ರಾಜಣ್ಣ ಅವರು ಸತ್ಯ ವಿಚಾರವನ್ನು ಹೇಳಿದ್ದರು. ನಮ್ಮ ಸರ್ಕಾರ ಇತ್ತು, ನಮ್ಮದೇ ತಪ್ಪು ಎಂದು ರಾಜಣ್ಣ ಹೇಳಿದ್ದರು. ಜನರ ಪ್ರಶ್ನೆಯನ್ನೇ ಅವರು ಕೇಳಿದ್ದರು. ಸತ್ಯ ಹೇಳಿದ್ದಕ್ಕೆ ಅರಗಿಸಿಕೊಳ್ಳಲಾಗದೇ ರಾಜೀನಾಮೆ ಪಡೆಯಲಾಗಿದೆ.

ರಾಜಣ್ಣ ಅವರಿಗೆ ಸಿದ್ದರಾಮಯ್ಯ ಆಪ್ತರಾಗಿದ್ದು, ಇವತ್ತು ಸಿದ್ದರಾಮಯ್ಯ ಅವರಿಗೂ ರಾಜಣ್ಣರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಮೂಲಕ ದೇಶಕ್ಕೆ ರಾಹುಲ್ ಗಾಂಧಿಯವರ ಸುಳ್ಳು ಗೊತ್ತಾಗಿದೆ ಎಂದು ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ