ವಿಮಾನದಲ್ಲಿ ಉಸಿರುಗಟ್ಟಿದ ವಾತಾವರಣ ಇದೆ ಎಂದು ಮಹಿಳೆಯೊಬ್ಬಳು ಮಾಡಿದ್ದೇನು ಗೊತ್ತಾ?

ಶನಿವಾರ, 28 ಸೆಪ್ಟಂಬರ್ 2019 (08:56 IST)
ಬೀಜಿಂಗ್ : ವಿಮಾನದಲ್ಲಿ ಉಸಿರುಗಟ್ಟಿದ ವಾತಾವರಣ ಇದೆ ಎಂದು ಮಹಿಳೆಯೊಬ್ಬಳು ಮಾಡಿದ ಘನಕಾರ್ಯವನ್ನು ಕಂಡು ವಿಮಾನ ಸಿಬ್ಬಂದಿಗಳು, ಪ್ರಯಾಣಿಕರು ದಂಗಾಗಿದ್ದಾರೆ.




ಹೌದು. ಚೀನಾದ ವುಹಾನ್‌ ನಿಂದ ಲಾನ್ಜುವಾ ಕಡೆ ಶಿಯಾಮೆನ್ ಏರ್ ಜೆಟ್ ನಲ್ಲಿ ಕುಳಿತಿದ್ದ ಚೀನಾ ಮಹಿಳೆಗೆ, ವಿಮಾನ ಟೇಕ್ ಆಫ್ ಆಗುವ ಮುನ್ನ ಸೆಕೆಯಾಗಿ ಉಸಿರುಗಟ್ಟಿದಂತಾಗಿದೆ. ತಕ್ಷಣ ಆ ಯುವತಿ ಎಮರ್ಜೆನ್ಸಿ ಡೋರ್ ತೆಗೆದಿದ್ದಾಳೆ.


ತಕ್ಷಣ ಇದನ್ನು ಗಮನಿಸಿದ ಕ್ಯಾಬಿನ್ ಸಿಬ್ಬಂದಿ ವಿಮಾನ ಟೇಕ್ ಆಫ್ ಆಗದಂತೆ ಸೂಚನೆ ನೀಡಿ ನಡೆಯಲಿರುವ ಭಾರೀ ದುರಂತವನ್ನು ತಪ್ಪಿಸಿದ್ದಾರೆ. ಈ ಘಟನೆಯನ್ನು ಪ್ರಯಾಣಿಕರು ವಿಡಿಯೋ ಮಾಡಿಕೊಂಡಿದ್ದು, ಇದೀಗ ಎಲ್ಲೆಲ್ಲೂ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ