ಭಾರತಕ್ಕೆ ಬರಲು ವಿಮಾನ ವಿಳಂಬ: ಟ್ವಿಟರ್ ನಲ್ಲಿ ಆಕ್ರೋಶ ಹೊರಹಾಕಿದ ದ.ಆಫ್ರಿಕಾ ಕ್ರಿಕೆಟ್ ತಂಡದ ನಾಯಕ

ಭಾನುವಾರ, 22 ಸೆಪ್ಟಂಬರ್ 2019 (09:20 IST)
ಮುಂಬೈ: ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಸರಣಿ ಆಡಲು ಭಾರತಕ್ಕೆ ಹೊರಟಿದ್ದ ದ.ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಫಾ ಡು ಪ್ಲೆಸಿಸ್ ಸಕಾಲದಲ್ಲಿ ವಿಮಾನ ಸಿಗದೇ ಪರದಾಡುವ ಸ್ಥಿತಿ ಎದುರಾಗಿದೆ.


ದುಬೈಯಿಂದ ಭಾರತಕ್ಕೆ ಬರಲು ಪ್ಲೆಸಿಸ್ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ದುಬೈಗೆ ಬರುವ ಬ್ರಿಟಿಷ್ ಏರ್ ವೇಸ್ ನಾಲ್ಕು ಗಂಟೆ ವಿಳಂಬವಾದ್ದರಿಂದ ದುಬೈಯಿಂದ ಭಾರತಕ್ಕೆ ಬರಬೇಕಿದ್ದ ವಿಮಾನ ಪ್ಲೆಸಿಸ್ ಗೆ ಮಿಸ್ ಆಗಿತ್ತು.

ಇದರಿಂದಾಗಿ ಅವರು ಮತ್ತೆ ದುಬೈನಲ್ಲಿ 10 ಗಂಟೆ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಇದರ ಬಗ್ಗೆ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಪ್ಲೆಸಿಸ್ ಕೊನೆಗೂ ವಿಮಾನ ಸಿಕ್ಕಿತು. ಆದರೆ ದುಬೈನಿಂದ ಭಾರತಕ್ಕೆ ಸಾಗುವ ವಿಮಾನ ಮಿಸ್ ಆಗಲಿದೆ. ಇನ್ನು 10 ಗಂಟೆ ನಾನು ಕಾಯಬೇಕು’ ಎಂದು ಪ್ಲೆಸಿಸ್ ಸಂಕಷ್ಟ ತೋಡಿಕೊಂಡಿದ್ದಾರೆ. ಟಿ20 ಸರಣಿ ಮುಗಿದ ಬಳಿಕ ಆಫ್ರಿಕಾ-ಭಾರತ ಟೆಸ್ಟ್ ಸರಣಿ ಆಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ