ಚೀನಾದ ಮಹಿಳೆಯನ್ನು ಭೇಟಿ ಮಾಡಿ ಬಂದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?

ಬುಧವಾರ, 4 ಮಾರ್ಚ್ 2020 (06:14 IST)
ಯುರೋಪ್ : ಪತ್ನಿಗೆ ಕೊರೊನಾ ವೈರಸ್ ತಗುಲಿರಬಹುದು ಎಂಬ ಅನುಮಾನದಿಂದ ಪತಿ  ಆಕೆಯನ್ನು ಬಾತ್ ರೂಂನಲ್ಲಿ ಕೂಡಿ ಹಾಕಿದ ಘಟನೆ ಯುರೋಪಿನ ಲಿಥುವೇನಿಯಾದ ಲೆವಿಯಸ್ ನಲ್ಲಿ ನಡೆದಿದೆ.


ಪತ್ನಿ ಚೀನಾದ ಮಹಿಳೆಯೊಬ್ಬಳನ್ನು ಭೇಟಿ ಮಾಡಿ ಬಂದಿದ್ದಳು. ಈ ವಿಚಾರ ತಿಳಿದ ಪತಿ ಆಕೆಗೆ ಕೊರೊನಾ ವೈರಸ್ ತಗಲಿರಬಹುದು ಎಂಬ ಶಂಕೆಯಿಂದ ಆಕೆಯನ್ನು ಬಾತ್ ರೂಂನಲ್ಲಿ ಕೂಡಿದ್ದಾನೆ. ಬಳಿಕ ಆಕೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾಳೆ.


ಮಹಿಳೆ ಪೊಲೀಸರಿಗೆ ದೂರು ನೀಡದ ಹಿನ್ನಲೆಯಲ್ಲಿ ಪತಿಯನ್ನು ಪೊಲೀಸರ ಬಂಧಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ