ಮಗಳಿಗೆ ಕೈ ಕೊಟ್ಟು ಎರಡನೇ ಮದುವೆಗೆ ಮುಂದಾದ ಅಳಿಯ : ಮದುವೆ ಕ್ಯಾನ್ಸಲ್ ಮಾಡಿಸಿದ ಅತ್ತೆ

ಗುರುವಾರ, 27 ಫೆಬ್ರವರಿ 2020 (15:24 IST)

ತನ್ನ ಮಗಳನ್ನು ಮದುವೆಯಾಗಿ ಅವಳಿಗೆ ನಾಲ್ಕು ಮಕ್ಕಳನ್ನು ಕರುಣಿಸಿ ಇದೀಗ ಎರಡನೇ ಮದುವೆಗೆ ಮಾಡಿಕೊಳ್ಳುತ್ತಿದ್ದ ಅಳಿಯನ ಮದುವೆಯನ್ನು ಅತ್ತೆಯೇ ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

ವೆಲರಿಯನ ಡಿಸೋಜ್ ಎಂಬಾತ ವಿಲ್ಮಾ ಡಿಸೋಜಾರನ್ನು ಮದುವೆಯಾಗಿ ನಾಲ್ಕು ಮಕ್ಕಳ ತಂದೆಯಾಗಿದ್ದಾನೆ. ವಿಲ್ಮಾ ಸದ್ಯ ವಿದೇಶದಲ್ಲಿ ಕೆಲಸದ ಮೇಲಿದ್ದಾರೆ.

ಇದನ್ನೇ ದುರುಪಯೋಗ ಪಡಿಸಿಕೊಳ್ಳೋಕೆ ಮುಂದಾದ ವೆಲರಿಯನ್ ಡಿಸೋಜ್ ತಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಅಷ್ಟೇ ಅಲ್ಲ, ತನ್ನ ಹೆಸರನ್ನು ಮಹ್ಮದ್ ಶರೀಫ್ ಅಂತ ಬದಲಾಯಿಸಿಕೊಂಡು ಮುಸ್ಲಿಂ ಯುವತಿ ಜೊತೆಗೆ ಮದುವೆ ಮಾಡಿಕೊಳ್ಳುತ್ತಿದ್ದನು.

ಮಂಗಳೂರಿನ ತೊಕ್ಕೊಟ್ಟಿನಲ್ಲಿ ನಡೆಯಬೇಕಿದ್ದ ಮದುವೆ ಮೇಲೆ ಪೊಲೀಸರ ನೆರವಿನಿಂದ ಅತ್ತೆಯೇ ಅಳಿಯನ ಎರಡನೇ ಮದುವೆಯನ್ನು ತಡೆದುನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾಳೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ