ಕಾಡು ಬೆಕ್ಕಿನ ಪ್ರಾಣ ಉಳಿಸಲು ಈ ಮಹಿಳೆ ಮಾಡಿದ್ದೇನು ಗೊತ್ತೆ?

ಮಂಗಳವಾರ, 24 ಸೆಪ್ಟಂಬರ್ 2019 (08:00 IST)
ಕೊಲೊರಾಡೋ : ಮಹಿಳೆಯೊಬ್ಬಳು  ಗಾಯಗೊಂಡ ಕಾಡು ಬೆಕ್ಕಿನ ಪ್ರಾಣ ಉಳಿಸಲು ತನ್ನ 3 ವರ್ಷದ ಮಗುವಿನ ಜೊತೆ ಕಾರಿನಲ್ಲಿ ಇರಿಸಿಕೊಂಡು ಬಂದ ಘಟನೆ ಕೊಲೊರಾಡೋನಲ್ಲಿ ನಡೆದಿದೆ.




ರಸ್ತೆ ಅಫಘಾತದಲ್ಲಿ ಗಾಯಗೊಂಡಿದ್ದ ಬಾಬ್‌ ಕ್ಯಾಟ್‌ ನ್ನು  ತನ್ನ ಕಾರಿನ ಹಿಂದಿನ ಸೀಟ್‌ ಮೇಲೆ, ತನ್ನ ಮಗುವಿನಿಂದ ಕೆಲವೇ ಇಂಚುಗಳ ದೂರದಲ್ಲಿ ಇಟ್ಟುಕೊಂಡಿದ್ದ ಮಹಿಳೆ ಕೂಡಲೇ ಕೊಲರಾಡೋ ವನ್ಯಜೀವಿ ಇಲಾಖೆಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾಳೆ. ಅದಕ್ಕೆ ಅವರು ತಕ್ಷಣ ಮಗು ಮತ್ತು ಆಕೆಗೆ ಕಾರಿನಿಂದ ಹೊರಬರಲು ತಿಳಿಸಿದ್ದಾರೆ.


ಕಾರಣ ತನ್ನ ಬಲಿಷ್ಠವಾದ ಹಲ್ಲುಗಳಿಂದ ಚುರುಕಾಗಿ ದಾಳಿ ಮಾಡಬಲ್ಲ ಬಾಬ್‌ ಕ್ಯಾಟ್‌ ನ್ನು ಆಕೆ ತನ್ನ ಕಾರಿನಲ್ಲಿ ಮಗುವಿನ ಪಕ್ಕ ಇರಿಸಿದ್ದಳು. ಅದಕ್ಕೆ ಭಾರೀ ಪ್ರಮಾಣದಲ್ಲಿ ಗಾಯವಾಗಿ, ಹಿಂಬದಿಯ ಕಾಲುಗಳು ನಿಷ್ಕ್ರಿಯವಾಗಿದ್ದ ಕಾರಣ, ತಾಯಿ-ಮಗುವಿನ ಮೇಲೆ ಅದು ದಾಳಿ ಮಾಡಲು ಮುಂದಾಗಲಿಲ್ಲ ಎನ್ನಲಾಗಿದೆ.


ಅಲ್ಲದೇ ಒಂಬತ್ತು ಕೆಜಿ ತೂಗುವ ದೊಡ್ಡ ಬೆಕ್ಕನ್ನು ಟವೆಲ್‌ ಒಂದರಲ್ಲಿ ಮುಚ್ಚಿ, ಹಿಂಬದಿಯ ಸೀಟ್‌ನಲ್ಲಿ ಇಟ್ಟಿದ್ದು, ಅದರ ಕಣ್ಣುಗಳು ತೆರೆದಿರುವುದನ್ನು ನೋಡಿ ಅಧಿಕಾರಿಗಳೇ ಆಘಾತಗೊಂಡಿದ್ದಾರೆ. ಹಾಗೇ ಯಾರು ಕಾಡಿನ ಕ್ರೂರ ಪ್ರಾಣಿಗಳ ಜೊತೆ ಈ ರೀತಿ ಇರಬಾರದು, ಇದು ದುರಂತಕ್ಕೆ ಕಾರಣವಾಗಬಹುದು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ