ಮಗುವಿನ ಜತೆ ಪತಿಯನ್ನ ತೋರಿಸ್ತಿನಿ ಎಂದ ರಾಖಿ ಸಾವಂತ್

ಬುಧವಾರ, 18 ಸೆಪ್ಟಂಬರ್ 2019 (15:53 IST)

ಬಾಲಿವುಡ್ ನಟಿ ಹಾಗೂ ವಿವಾದಗಳಿಂದಲೇ ಸುದ್ದಿಯಾಗೋ ರಾಖಿ ಸಾವಂತ್ ಮದುವೆಯಾಗಿದ್ದು ಹಳೇ ಸುದ್ದಿ. ಆದರೆ ಈಗ ತನ್ನ ಮಗುವಿನ ಜತೆ ಗಂಡನನ್ನ ತೋರಿಸ್ತಿನಿ ಅಂತ ಹೊಸ ವರಸೆ ಶುರುಮಾಡಿದ್ದಾಳೆ.

ಉದ್ಯಮಿ ರಿತೇಶ್ ಅನ್ನೋರನ್ನ ಮದುವೆಯಾಗಿದ್ದೇನೆ ಅಂತ ರಾಖಿ ಹೇಳಿಕೊಂಡಿದ್ದಾಳೆ. ಆದರೆ ಈವರೆಗೂ ರಿತೇಶ್ ಪೋಟೋ ಯಾರಿಗೂ ತೋರಿಸಿಲ್ಲ.

ಮುಂದಿನ ವರ್ಷ ನನಗೆ ಮಗು ಆಗುತ್ತೆ. ನಾನು ಮಗುವಿನೊಂದಿಗೆ ಅವರ ಅಪ್ಪ ಅಂದರೆ ನನ್ನ ಗಂಡ ರಿತೇಶ್ ನನ್ನು ತೋರಿಸ್ತೇನೆ ಅಂತ ಹೊಸ ಡ್ರಾಮಾ ನಡೆಸಿದ್ದಾಳೆ.

ಬಿಗ್ ಬಾಸ್ 13 ರಲ್ಲಿ ಪತಿ ಜತೆಗೆ ಪಾಲ್ಗೊಳ್ಳುತ್ತಿದ್ದೇನೆ. ಅಲ್ಲೇ ನನ್ ಸ್ಮಾರ್ಟ್ ಆಗಿರೋ ಗಂಡನನ್ನ ತೋರಿಸ್ತಿನಿ ಅಂತಾನೂ ರಾಖಿ ಹೇಳಿಕೊಂಡಿದ್ದಾಳೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ