ಸಹಾಯಕ ಕಮಿಷನರ್ ಸಲೀಮ್ ತೀರ್ಪು ನೀಡುವ ಸಂದರ್ಭದಲ್ಲಿ "ಆ ನಾಯಿ ಮಗುವನ್ನು ಗಾಯಗೊಳಿಸಿದೆ, ಆದ್ದರಿಂದ, ಅದನ್ನು ಕೊಲ್ಲಬೇಕು" ಎಂದು ಘೋಷಿಸಿ ವಿಶಿಷ್ಟ ಮತ್ತು ವಿಲಕ್ಷಣವಾದ ವಾದವನ್ನು ಮಂಡಿಸಿದರು.
ನಾಯಿಯ ಮಾಲೀಕರು ವಿಪರೀತ ಶಿಕ್ಷೆಯ ವಿರುದ್ಧ ಹೆಚ್ಚುವರಿ ಉಪ ಕಮೀಷನರ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ "ಬಾಧಿತ ಮಗುವಿನ ಕುಟುಂಬವು ನನ್ನ ನಾಯಿಯ ವಿರುದ್ಧ ಪ್ರಕರಣ ದಾಖಲಿಸಿದೆ, ಅದರಿಂದಾಗಿ ನಾಯಿ ಒಂದು ವಾರ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದೆ. ಇದೀಗ ನೀಡುವ ಯಾವುದೇ ಶಿಕ್ಷೆ ಅನ್ಯಾಯವಾಗುತ್ತದೆ ಎಂದು ನಾಯಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾಗಿ ಮೂಲಗಳು ತಿಳಿಸಿವೆ.