ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

Sampriya

ಮಂಗಳವಾರ, 29 ಜುಲೈ 2025 (19:06 IST)
Photo Credit X
ಕೊಪ್ಪಳ:  ರೈತರ ಹೆಸರಿನಲ್ಲಿ ರಾಜಕಾರಣ ಮಾಡುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯದಲ್ಲಿ ಪ್ರತಿಭಟನೆ ಮಾಡುವುದು ಬಿಟ್ಟು, ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಆಕ್ರೋಶ ಹೊರಹಾಕಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ ಅವರು,  'ಈ ಬಾರಿಯ ಮುಂಗಾರಿನಲ್ಲಿ ಬಿತ್ತನೆ ಬೇಗನೆ ಆರಂಭವಾಗಿರುವ ಕಾರಣ ಈಗ ಯೂರಿಯಾ ರಸಗೊಬ್ಬರದ ಕೊರತೆಯಾಗಿದೆ. ಒಂದು ದಿನ ತಡವಾದರೂ ರೈತರಿಗೆ ನಿಶ್ಚಿತವಾಗಿಯೂ ಗೊಬ್ಬರ ಕೊಡುತ್ತೇವೆ. ಬಿಜೆಪಿಗೆ ಪ್ರತಿಭಟನೆ ಮಾಡುವ ಯಾವುದೇ ನೈತಿಕತೆ ಅವರಿಗಿಲ್ಲ. ಅವರಿಗೆ ಯಾವುದೇ ನಾಚಿಕೆ, ಮಾನ, ಮರ್ಯಾದೆ ಇಲ್ಲ. ಯೂರಿಯಾ ಪೂರೈಕೆ ಮಾಡುವುದು ರಾಜ್ಯ ಸರ್ಕಾರವೇ’ ಎಂದು ಪ್ರಶ್ನೆ ಮಾಡಿದರು.   

‘ಈ ವರ್ಷ ಬಿತ್ತನೆ ಬೇಗನೆ ಆರಂಭವಾಗಿದೆ. ಜನರಿಗೆ ಹಾದಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ಅವರ ಮಾತನ್ನು ಮಾಧ್ಯಮದವರು ನಂಬಬಾರದು’ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ