ನನ್ ಫ್ರೆಂಡ್ ಮೋದಿ ಜೊತೆ ಮಾತನಾಡಕ್ಕೆ ಕಾಯ್ತಿದ್ದೀನಿ ಎಂದ ಡೊನಾಲ್ಡ್ ಟ್ರಂಪ್

Krishnaveni K

ಬುಧವಾರ, 10 ಸೆಪ್ಟಂಬರ್ 2025 (09:06 IST)
ನವದೆಹಲಿ: ಭಾರತಕ್ಕೆ ಸುಂಕದ ಮೇಲೆ ಸುಂಕದ ಬರೆ ಹಾಕಿ ಕೈ ಸುಟ್ಟುಕೊಂಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಪದೇ ಪದೇ ಮೋದಿ ನನ್ ಫ್ರೆಂಡ್ ಎನ್ನುತ್ತಿದ್ದು ಅವರ ಜೊತೆ ಮಾತನಾಡಕ್ಕೆ ಕಾಯ್ತಿದ್ದೀನಿ ಎಂದಿದ್ದಾರೆ.

ಭಾರತದ ಮೇಲೆ ಬೇರೆ ದೇಶಕ್ಕೆ ಮಾಡಿದಂತೆ ಸುಂಕದ ಬರೆ ಎಳೆದು ಬಗ್ಗಿಸಲು ನೋಡಿದ್ದ ಟ್ರಂಪ್ ಗೆ ತಮ್ಮ ಯೋಜನೆ ತಮಗೇ ಉಲ್ಟಾ ಹೊಡೆಯುತ್ತಿದೆ ಎಂದು ಅರಿವಾಗುತ್ತಿರುವಂತಿದೆ. ಹಾಗಿದ್ದರೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗದು ಎಂಬಂತೆ ಸುಂಕ ಹಾಕಿದ್ದನ್ನು ಸಮರ್ಥಿಸುತ್ತಲೇ ಇದ್ದಾರೆ.

ಇದರ ನಡುವೆ ಈಗ ಎರಡನೇ ಬಾರಿ ಮೋದಿ ನನ್ನ ಸ್ನೇಹಿತ ಎಂದು ಬೆಣ್ಣೆ ಹಚ್ಚುವ ಕೆಲಸ ಮಾಡಿದ್ದಾರೆ. ಟ್ರೂಥ್ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಟ್ರಂಪ್, ಎರಡೂ ದೇಶಗಳು ಮತ್ತೆ ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ಪ್ರಕಟಿಸಲು ಸಂತೋಷವಾಗುತ್ತಿದೆ. ಮುಂಬರುವ ವಾರಗಳಲ್ಲಿ ನನ್ನ ಸ್ನೇಹಿತ ಮೋದಿ ಜೊತೆ ಮಾತನಾಡಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದೇ ತಿಂಗಳು ವಿಶ್ವಸಂಸ್ಥೆಯ ಮಹಾಸಭೆ ನಡೆಯಲಿದೆ. ಆದರೆ ಈ ಸಭೆಯಲ್ಲಿ ಮೋದಿ ಭಾಗಿಯಾಗುತ್ತಿಲ್ಲ. ಹೀಗಾಗಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಯಾವಾಗ ಭೇಟಿಯಾಗಬಹುದು ಎಂಬುದೇ ಎಲ್ಲರ ಕುತೂಹಲವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ