ಭಾರತಕ್ಕೆ ಮತ್ತೆ ಸುಂಕ ಬೆದರಿಕೆ ಹಾಕಿದ ಟ್ರಂಪ್: ಹಾಕ್ಕೋ ಹೋಗು ಎಂದ ಭಾರತೀಯರು

Krishnaveni K

ಗುರುವಾರ, 4 ಸೆಪ್ಟಂಬರ್ 2025 (13:27 IST)
ನವದೆಹಲಿ: ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದರೆ ಮತ್ತಷ್ಟು ಸುಂಕ ವಿಧಿಸಲು ಹಿಂದೆ ಮುಂದೆ ನೋಡಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯರು ಪ್ರತಿಕ್ರಿಯಿಸಿದ್ದು ಹಾಕ್ಕೋ ಹೋಗು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಭಾರತ-ರಷ್ಯಾ ನಡುವಿನ ನಿಕಟ ಸ್ನೇಹ ಟ್ರಂಪ್ ಹೊಟ್ಟೆ ಉರಿಸುತ್ತಿದೆ. 50% ಸುಂಕ ವಿಧಿಸಿದರೂ ಭಾರತ ಜಗ್ಗದೇ ಇರುವುದು ದೊಡ್ಡಣ್ಣನ ನಿದ್ದೆಗೆಡಿಸಿದೆ. ಹೀಗಾಗಿ ಭಾರತಕ್ಕೆ ಮತ್ತೆ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಚೀನಾ ಬಳಿಕ ರಷ್ಯಾದಿಂದ ತೈಲ ಖರೀದಿಸುತ್ತಿರುವ ಅತೀ ದೊಡ್ಡ ಖರೀದಿದಾರ ಭಾರತ ಎಂದಿದ್ದಾರೆ. ರಷ್ಯಾದೊಂದಿಗಿನ ವ್ಯಾಪಾರ ಸಂಬಂಧವನ್ನು ಮುಂದುವರಿಸುವ ದೇಶಗಳ ವಿರುದ್ಧ ಅಮೆರಿಕ ಇನ್ನೂ ಹಂತ-2, ಹಂತ-3 ಸುಂಕ ವಿಧಿಸಿಲ್ಲ. ಇದು ಹೀಗೇ ಮುಂದುವರಿದರೆ ಅದರ ಬಗ್ಗೆಯೂ ಪರಿಗಣಿಸಬೇಕಾಗುತ್ತದೆ.

ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜನ ಪ್ರತಿಕ್ರಿಯಿಸುತ್ತಿದ್ದು ಈ ಅಮೆರಿಕಾ ಅಧ್ಯಕ್ಷರಿಗೆ ನಿಜಕ್ಕೂ ತಲೆಕೆಟ್ಟಿರಬೇಕು. ಅದಕ್ಕೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ. ಹೀಗೇ ಹುಚ್ಚಾಟ ನಡೆಸಿದರೆ ನಾವಲ್ಲ, ಅಮೆರಿಕಾ ಜನರೇ ಈತನನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದಿದ್ದಾರೆ. ನಾವೇನು ಅಮೆರಿಕಾದ ಗುಲಾಮರಲ್ಲ. ನಿಮ್ಮ ಬೆದರಿಕೆ ನಿಮ್ಮಲ್ಲೇ ಇರಲಿ. ನಮಗೂ ಅಮೆರಿಕಾ ವಸ್ತುಗಳನ್ನು ಬಹಿಷ್ಕರಿಸಲು ಗೊತ್ತು ಎಂದು ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ