ಕ್ರೀಡಾಕೂಟಗಳಲ್ಲಿ ಮಹಿಳೆಯರ ವಿಭಾಗದಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ

Krishnaveni K

ಗುರುವಾರ, 6 ಫೆಬ್ರವರಿ 2025 (11:02 IST)
ವಾಷಿಂಗ್ಟನ್: ಕ್ರೀಡಾ ಕೂಟಗಳಲ್ಲಿ ಮಹಿಳೆಯರ ವಿಭಾಗದಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ ಹೇರುವ ಆದೇಶಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ತೃತೀಯ ಲಿಂಗಿಗಳು ಭಾಗಿಯಾಗುವುದರ ಬಗ್ಗೆ ಇದುವರೆಗೆ ಸಾಕಷ್ಟು ಆಕ್ಷೇಪ ಬರುತ್ತಿತ್ತು. ಕಳೆದ ಒಲಿಂಪಿಕ್ಸ್ ನಲ್ಲೂ ಕುಸ್ತಿ ವಿಭಾಗದಲ್ಲಿ ಮಹಿಳೆಯರ ಜೊತೆ ತೃತೀಯ ಲಿಂಗಿಗಳು ಭಾಗಿಯಾಗಿದ್ದು ವಿವಾದಕ್ಕೆ ಕಾರಣವಾಗಿತ್ತು.

ಇದರಿಂದ ಮಹಿಳೆಯರಿಗೆ ಅನ್ಯಾಯವಾಗುತ್ತಿತ್ತು ಎಂದು ಇದುವರೆಗೆ ಆಕ್ಷೇಪ ಬರುತ್ತಲೇ ಇತ್ತು. ಆದರೆ ಈಗ ಮಹಿಳೆಯರ ವಿಭಾಗದಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶವಿಲ್ಲ ಎಂಬ ನಿಯಮಕ್ಕೆ ಸಹಿ ಹಾಕಿರುವುದರಿಂದ ಈ ವಿವಾದಗಳಿಗೆ ತೆರೆ ಬೀಳಲಿದೆ.

ಹುಡುಗಿಯರು ಮತ್ತು ಮಹಿಳೆಯರ ಕ್ರೀಡೆಗಳಲ್ಲಿ ತೃತೀಯ ಕ್ರೀಡಾಪಟುಗಳು ಸ್ಪರ್ಧಿಸುವುದನ್ನು ನಿಷೇಧಿಸುತ್ತದೆ. ಹುಟ್ಟಿನಿಂದ ಬಂದ ಲಿಂಗತ್ವವನ್ನು ಅಮೆರಿಕಾ ಸರ್ಕಾರ ಪರಿಗಣಿಸುತ್ತದೆ. ಈ ಐತಿಹಾಸಿಕ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ