ಯೆಸ್ ಬ್ಯಾಂಕ್‌ಗೆ ₹3,000 ಕೋಟಿ ಸಾಲ ವಂಚನೆ: ಅನಿಲ್‌ ಅಂಬಾನಿಗೆ ಜಾರಿ ನಿರ್ದೇಶನಾಲಯ ಶಾಕ್‌

Sampriya

ಗುರುವಾರ, 24 ಜುಲೈ 2025 (14:41 IST)
Photo Credit X
ಮುಂಬೈ: ಉದ್ಯಮಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಗ್ರೂಪ್​ಗೆ ಸೇರಿದ ಹಲವು ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ. ಯೆಸ್ ಬ್ಯಾಂಕ್‌ಗೆ 3,000 ಕೋಟಿ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.

 ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಪ್ರವರ್ತಕ-ನಿರ್ದೇಶಕ ಅನಿಲ್ ಡಿ ಅಂಬಾನಿ ಅವರನ್ನು ವಂಚಕ ಎಂದು ವರ್ಗೀಕರಿಸಿದ ಕೆಲವೇ ದಿನಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

ಸುಮಾರು 35ಕ್ಕೂ ಹೆಚ್ಚು ಸ್ಥಳಗಳು, ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ನ 50 ಕಂಪನಿಗಳ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಡಿ ದಾಳಿ ನಡೆಸಿದೆ.  ಹಲವು ಏಜೆನ್ಸಿಗಳಿಂದ ದೊರೆತ ಮಾಹಿತಿ ಆಧಾರದ ಮೇಲೆ ತೀವ್ರ ಶೋಧ ನಡೆಸುತ್ತಿದೆ. 25ಕ್ಕೂ ಹೆಚ್ಚು ಮಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ಅನಿಲ್ ಅಂಬಾನಿ ಗ್ರೂಪ್ ಅಡಿಯಲ್ಲಿರುವ ರಿಲಯನ್ಸ್ ಸಂಸ್ಥೆಗಳಿಗೆ 2017 ಮತ್ತು 2019ರ ನಡುವೆ ಯೆಸ್‌ ಬ್ಯಾಂಕ್‌ ₹ 3,000 ಕೋಟಿ ಸಾಲ ನೀಡಿತ್ತು. ಆದರೆ ಈ ಸಾಲದ ಹಣವನ್ನ ಗ್ರೂಪ್‌ನ ಇತರ ಶೆಲ್‌ ಕಂಪನಿಗಳಿಗೆ (ಬೇನಾಮಿ ಕಂಪನಿ) ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ