ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಪರ್ಮನೆಂಟ್ ಆಗಿ ರದ್ದು

ಶನಿವಾರ, 9 ಜನವರಿ 2021 (10:28 IST)
ನ್ಯೂಯಾರ್ಕ್: ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಭೀತಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗಿದೆ.


ಅಮೆರಿಕಾದಲ್ಲಿ ಇತ್ತೀಚೆಗೆ ಟ್ರಂಪ್ ಬೆಂಬಲಿಗರಿಂದ ನಡೆದ ಹಿಂಸಾಚಾರದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಟ್ರಂಪ್ ರ ಇತ್ತೀಚೆಗಿನ ಕೆಲವು ಪ್ರಚೋದನಕಾರಿ ಟ್ವೀಟ್ ಗಳ ಹಿನ್ನಲೆಯಲ್ಲಿ ಅವರ ಖಾತೆಯನ್ನು ಟ್ವಿಟರ್ ಶಾಶ್ವತವಾಗಿ ರದ್ದು ಮಾಡಿದೆ. ಇದು ಟ್ರಂಪ್ ಗೆ ಮುಖಭಂಗವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ