ಪತ್ನಿ ಡಾ.ಕೃತಿಕಾ ಹತ್ಯೆ ಬಳಿಕ ಪಾಪ ಪ್ರಜ್ಞೆ: ಮಹೇಂದ್ರ ರೆಡ್ಡಿ ಏನ್ ಮಾಡಿದ ಗೊತ್ತಾ

Sampriya

ಶುಕ್ರವಾರ, 24 ಅಕ್ಟೋಬರ್ 2025 (17:20 IST)
ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಡಾ.ಕೃತಿಕಾ ಹತ್ಯೆ ಪ್ರಕರಣ ಸಂಬಂಧ ಕೊಲೆಗಾರ ಪತಿ ಮಹೇಂದ್ರ ರೆಡ್ಡಿ ಪೊಲೀಸರ ವಿಚಾರಣೆ ಸಂದರ್ಭ, ಕೊಲೆ ಮಾಡಿದ ಬಳಿಕ ಪಾಪ ಪ್ರಜ್ಞೆ ಕಾಡಿದ್ದರಿಂದ ಧಾರ್ಮಿಕ ಕ್ಷೇತ್ರಗಳ ಮೊರೆ ಹೋಗಿದ್ದಾಗಿ ಹೇಳಿಕೊಂಡಿದ್ದಾನೆ. 

ಮಾರತ್ ಹಳ್ಳಿಯಲ್ಲಿ ಡಾಕ್ಟರ್ ಪತಿ ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾಗೆ ಅನಸ್ತೇಷಿಯಾ ನೀಡಿ ಹತ್ಯೆ ಮಾಡಿದ್ದ. ಹತ್ಯೆ ಮಾಡಿ ತಿಂಗಳ ಬಳಿಕ ಪತಿ ಮಹೇಂದ್ರ ರೆಡ್ಡಿ ಕ್ರಿಮಿನಲ್ ಪ್ಲ್ಯಾನ್ ಬಯಲಾಗಿದೆ. ಹತ್ಯೆ ವಿಚಾರ ಗೊತ್ತಾದರೆ ಜೈಲು ಸೇರಬೇಕಾಗುತ್ತೆ ಎಂಬ ಆತಂಕ ಕಾಡಿದ್ದ ಮಹೇಂದ್ರ ರೆಡ್ಡಿ ಟೆಂಪಲ್ ರನ್ ಶುರು ಮಾಡಿದ್ದಾನೆ. 

ಧರ್ಮಸ್ಥಳ, ಚಾಮುಂಡಿ ಬೆಟ್ಟ, ತಿರುಪತಿ, ಕುಕ್ಕೆ ಸೇರಿದಂತೆ ಹತ್ತಾರು ಕಡೆ ಹೋಗಿ, ಪತ್ನಿ ಕೊಲೆ ಕೇಸ್‌ನಿಂದ ಪಾರು ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದ.  ಹತ್ಯೆ ಮಾಡಿದ ಬಳಿಕ ಆರು ತಿಂಗಳ ಅವಧಿಯಲ್ಲಿ ಹಂತಕ ದೇವರ ಮೊರೆ ಹೋಗಿ ಹರಕೆ ಹೊತ್ತಿಕೊಂಡಿದ್ದಾನೆ.

ಬೇರೆ ಬೇರೆ ದೇವಸ್ಥಾನಗಳಿಗೆ ಹೋಗಿ ಬಂದಿರುವ ಪೋಟೋಗಳನ್ನ ಪರಿಶೀಲನೆ ಮಾಡಿ ಪೊಲೀಸರು ತನಿಖೆ ವೇಳೆ ಕೇಳಿದಾಗ, ಪತ್ನಿ ಹತ್ಯೆಯ ಬಳಿಕ ಟೆಂಪಲ್ ರನ್ ಮಾಡಿರುವ ವಿಚಾರ ಬಹಿರಂಗವಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ