ಕೊರೊನಾ ದಿಂದ ಜೀವ ಉಳಿಸಿಕೊಳ್ಳಲು ಮದ್ಯ ಸೇವನೆ ಮಾಡಿ ಪ್ರಾಣ ಬಿಟ್ಟರು

ಬುಧವಾರ, 11 ಮಾರ್ಚ್ 2020 (09:32 IST)
ಇರಾನ್ : ಕೊರೊನಾ ವೈರಸ್ ನಿಂದ ಜೀವ ಉಳಿಸಿಕೊಳ್ಳಲು ಮದ್ಯ ಸೇವನೆ ಮಾಡಿ ಕೆಲವರು ಸಾವನಪ್ಪಿದ ಘಟನೆ ಇರಾನ್ ನ ನೈರುತ್ಯ ಪ್ರದೇಶದ ಖುಜೆಸ್ತಾನ್ ಮತ್ತು ಉತ್ತರ ಭಾಗದ ಅಲ್ಬೋರ್ಜ್ ನಲ್ಲಿ ನಡೆದಿದೆ.


ಇರಾನ್ ನಲ್ಲಿ ಕೊರೊನಾ ಸೋಂಕಿನಿಂದ ಈಗಾಗಲೇ 237 ಮಂದಿ ಸಾವನಪ್ಪಿದ್ದು, 7,161 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ನಡುವೆ ಮದ್ಯ ಸೇವನೆ ಮಾಡಿದರೆ ಕೊರೊನಾ ವೈರಸ್ ನಿಂದ ಪಾರಾಗಬಹುದು ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು.


ಇದನ್ನು ನಂಬಿದ ಹಲವು ಮಂದಿ ಕೊರೊನಾ ಪೀಡಿತರು ಕಳ್ಳಭಟ್ಟಿ ಸಾರಾಯಿ ಸೇವನೆ ಮಾಡಿದ ಪರಿಣಾಮ ಅಸ್ವಸ್ಥರಾಗಿದ್ದು, ಬಳಿಕ ಅದರಲ್ಲಿ 36 ಮಂದಿ ಸಾವನಪ್ಪಿದ್ದಾರೆ ಎಂದು ಇರಾನ್ ಸರ್ಕಾರ ತಿಳಿಸಿದೆ. ಆದಕಾರಣ ಅಲ್ಲಿನ ಸರ್ಕಾರ ಮದ್ಯಸೇವನೆಗೆ ನಿಷೇಧ ಹೇರಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ