ಕೊರೊನಾವೈರಸ್ ಭೀತಿ: ಏಷ್ಯಾ ಇಲೆವೆನ್, ವಿಶ್ವ ಇಲೆವೆನ್ ಪಂದ್ಯ ರದ್ದು

ಮಂಗಳವಾರ, 10 ಮಾರ್ಚ್ 2020 (10:20 IST)
ಢಾಕಾ: ಕೊರೊನಾವೈರಸ್ ಭೀತಿ ವಿಶ್ವದಾದ್ಯಂತ ಹರಡಿದ್ದು, ಬಾಂಗ್ಲಾದೇಶದಲ್ಲಿ ನಡೆಯಲಿರುವ ವಿಶ್ವ ಇಲೆವೆನ್ ಮತ್ತು ಏಷ್ಯಾ ಇಲೆವೆನ್ ತಂಡದ ನಡುವಿನ ಟಿ20 ಕ್ರಿಕೆಟ್ ಪಂದ್ಯ ಮುಂದೂಡಿಕೆಯಾಗುವ ಸಾಧ‍್ಯತೆಯಿದೆ.


ಹಲವು ರಾಷ್ಟ್ರಗಳ ಕ್ರಿಕೆಟಿಗರು ಈಗ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಈ ವಿಶೇಷ ಪಂದ್ಯ ಆಯೋಜನೆಯನ್ನು ಕೆಲವು ದಿನಗಳ ಕಾಲ ಮುಂದೂಡಿಕೆ ಮಾಡಲು ಬಾಂಗ್ಲಾ ಕ್ರಿಕೆಟ್ ಮಂಡಳಿ ಚಿಂತನೆ ನಡೆಸಿದೆ.

ಈಗಾಗಲೇ ಜಾಗತಿಕ ಮಟ್ಟದಲ್ಲಿ ಹಲವು ಕ್ರೀಡಾ ಕೂಟಗಳು ಮುಂದೂಡಿಕೆಯಾಗುವ ಭೀತಿಯಲ್ಲಿದೆ. ಹೀಗಾಗಿ ಈ ಪಂದ್ಯವೂ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ಬಿಸಿಬಿ ಮೂಲಗಳು ಹೇಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ