ಭೂಮಿಯಲ್ಲಿ ತುಂಬಿ ತುಳುಕುತ್ತಿರುವ ಜನಸಂಖ್ಯೆಯನ್ನ ಅನ್ಯಗ್ರಹಕ್ಕೆ ಶಿಫ್ಟ್ ಮಾಡುವ ಆಲೋಚನೆಗೆ ಇಂಬು ನೀಡುವಂತಹ ಸಂಸೋಧನೆಯನ್ನ ನಾಸಾ ವಿಜ್ಞಾನಿಗಳು ಮಾಡಿದ್ದಾರೆ. ಭೂಮಿಯನ್ನೇ ಹೋಲುವ 7 ಗ್ರಹಗಳನ್ನ ಪತ್ತೆಮಾಡಿದ್ದು, ಇಲ್ಲಿ ಮಾನವನ ವಾಸಕ್ಕೆ ಅನುಕೂಲಕರಕರ ವಾತಾವರಣ ಇದೇ ಎನ್ನಲಾಗುತ್ತಿದೆ.
ಈ 7 ಗ್ರಹಗಳು ಭೂಮಿಯಿಂದ 40 ಜ್ಯೋತಿರ್ವರ್ಷ್ಗಳಷ್ಟು ದೂರದಲ್ಲಿದ್ದು,, ಮತ್ತೊಂದು ಬೃಹತ್ ನಕ್ಷತ್ರದ ಸುತ್ತ ಸುತ್ತುತ್ತಿವೆ. ಇಲ್ಲಿನ ಕೆಲ ಗ್ರಹಗಳಲ್ಲಿ ನೀರಿನ ಮೂಲವಿರುವ ಬಗ್ಗೆ ವಿಜ್ಞಾನಿಗಳಿಗೆ ಸಾಕ್ಷ್ಯ ಸಿಕ್ಕಿದೆ. ನೀರು ಇದ್ದ ಮೇಲೆ ಜೀವಿಗಳು ಇರಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ.