ಬೀಜಿಂಗ್ : ಅಮೆರಿಕ ಮತ್ತು ಚೀನಾ ನಡುವೆ ತಲೆದೋರಿರುವ ಉದ್ವಿಗ್ನತೆ ನಡುವೆ, ಉತ್ತರ ಕೊರಿಯಾ ಮಿಲಿಟರಿ ಸಾಮರ್ಥ್ಯಗಳ ಬಗ್ಗೆ ಚೀನಾದ ರಕ್ಷಣಾ ವಿಜ್ಞಾನಿಗಳು ಹೇಳಿಕೆ ನೀಡಿದ್ದಾರೆ. ಉತ್ತರ ಕೊರಿಯಾವು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಂದಿದ್ದು, ಅದು ಕೇವಲ 33 ನಿಮಿಷಗಳಲ್ಲಿ ಅಮೆರಿಕವನ್ನು ವಿನಾಶಗೊಳಿಸಬಹುದು ಎಂದಿದ್ದಾರೆ.
ಉತ್ತರ ಕೊರಿಯಾದ ಕ್ಷಿಪಣಿಯು ಮಧ್ಯ ಅಮೆರಿಕವನ್ನು 1,997 ಸೆಕೆಂಡುಗಳಲ್ಲಿ ಅಂದರೆ ಸರಿಸುಮಾರು 33 ನಿಮಿಷಗಳಲ್ಲಿ ತಲುಪಬಹುದು (ಯುಎಸ್ ಕ್ಷಿಪಣಿ ರಕ್ಷಣಾ ಜಾಲವು ಉ.ಕೊರಿಯಾ ಕ್ಷಿಪಣಿಯನ್ನು ಪ್ರತಿಬಂಧಿಸಲು ವಿಫಲವಾದರೆ) ಎಂದು ಚೀನಾದ ರಕ್ಷಣಾ ತಜ್ಞರು ಹೇಳಿಕೆ ನೀಡಿದ್ದಾರೆ.
ಬೀಜಿಂಗ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಇಂಜಿನಿಯರಿಂಗ್ನ ಟ್ಯಾಂಗ್ ಯುವಾನ್ ನೇತೃತ್ವದ ಸಂಶೋಧನಾ ತಂಡದ ಪ್ರಕಾರ, ಉತ್ತರ ಕೊರಿಯಾ ಕ್ಷಿಪಣಿಯು ಎರಡು ಹಂತದ ಪರಮಾಣು-ಸಾಮರ್ಥ್ಯದ ಅಸ್ತ್ರವಾಗಿದ್ದು, 13,000 ಕಿಮೀ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ತಲುಪುವ ಸಾಮರ್ಥ್ಯ ಹೊಂದಿದೆ. ಇದು ಇಡೀ ಅಮೆರಿಕವನ್ನು ನಾಶ ಮಾಡಲು ಸಾಕು ಎಂದು ತಿಳಿಸಿದೆ.