ಭಾರತದ ಮಾರುಕಟ್ಟೆ ಮೇಲೆ ರಷ್ಯಾಗೆ ಒಲವೇಕೆ?

ಶುಕ್ರವಾರ, 3 ಮಾರ್ಚ್ 2023 (11:42 IST)
ನವದೆಹಲಿ : ಭಾರತಕ್ಕೆ ತೈಲ ರಫ್ತು ರಷ್ಯಾಗೆ ಹೆಚ್ಚು ಲಾಭದಾಯಕವಾಗಿದೆ. ರಷ್ಯಾದ ಪಶ್ಚಿಮ ಬಂದರುಗಳಿಂದ ಭಾರತವನ್ನು ತಲುಪಲು ಟ್ಯಾಂಕರ್ ಸರಾಸರಿ 35 ದಿನಗಳನ್ನು ತೆಗೆದುಕೊಳ್ಳುತ್ತದೆ.

ಚೀನಾಕ್ಕೆ 40 ರಿಂದ 45 ದಿನಗಳು ಬೇಕಾಗುತ್ತದೆ ಹೀಗಾಗಿ ಚೀನಾದ ಬೇಡಿಕೆಯಲ್ಲಿ ಹೆಚ್ಚಳ ಕಂಡರೂ ಭಾರತಕ್ಕೆ ರಷ್ಯಾ ಎಷ್ಟು ಸಾಧ್ಯವೋ ಅಷ್ಟು ತೈಲ ಮಾರಾಟವನ್ನು ಮುಂದುವರಿಸಲಿದೆ.

ಚೀನಾ ತಮ್ಮದೇ ಆದ ಶಿಪ್ಪಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಚೀನಾ ರಿಫೈನರಿಗಳು ರಷ್ಯಾದಿಂದ ತೈಲ ಆಮದು ಮಾಡಿಕೊಂಡು, ಸಂಸ್ಕರಿಸಿ ಮಾರಾಟ ಮಾಡುತ್ತದೆ. ಇದರಿಂದ ರಷ್ಯಾ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುವುದಿಲ್ಲ. ಆದರೆ ಭಾರತದಲ್ಲಿ ತೈಲ ಸಂಸ್ಕರಣಾ ಕಂಪನಿಗಳು ಖಾಸಗಿಯದ್ದಾಗಿವೆ. ರಷ್ಯಾ ಹೆಚ್ಚಿನ ಆದಾಯ ಗಳಿಸಲು ಭಾರತದ ಮಾರುಕಟ್ಟೆ ಸಹಕಾರಿಯಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ